ಕಾರವಾರ: ನಗರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರ ಆಯ್ಕೆ ವಿಷಯವಾಗಿ ಶನಿವಾರ ರಾತ್ರಿಯವರೆಗೂ ಸಾಕಷ್ಟು ಗೊಂದಲ – ವಿರೋಧ ವ್ಯಕ್ತವಾಗಿದ್ದು, ಬಿಜೆಪಿ ಸದಸ್ಯೆ ಮಾಲಾ ಹುಲಸ್ವಾರ್ ಅವರು ಕಾಂಗ್ರೆಸ್ ಸದಸ್ಯರ ಸಹಕಾರದಿಂದ ಆಯ್ಕೆಯಾದರು!
ನಗರಸಭೆಯ ಸಾಮಾನ್ಯ ಸಭೆಯ ಸಂದರ್ಭದಲ್ಲೇ ನೂತನ ಸ್ಥಾಯಿ ಸಮಿತಿ ರಚನೆ ಮಾಡಲು ನಿರ್ಧಾರಕೈಗೊಳ್ಳಲಾಗಿತ್ತು. ಆದರೆ ಅಧ್ಯಕ್ಷರ ಆಯ್ಕೆಯನ್ನು ಎರಡು ದಿನದಲ್ಲಿ ಕೈಗೊಳ್ಳುವ ಎಂದಾಗ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಶನಿವಾರ ಸಂಜೆ 6ಗಂಟೆಯವರೆಗೂ ಆಯ್ಕೆ ವಿಷಯದಲ್ಲಿ ಗೊಂದಲ ಸೃಷ್ಟಿಯಾಗಿ ಅಧ್ಯಕ್ಷರು, ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಗಲಾಟೆ ನಡೆಯಿತು.
ಸಮಿತಿಯ ಸದಸ್ಯರ ಆಯ್ಕೆಗೆ ಅಧ್ಯಕ್ಷರು ಸದಸ್ಯರ ಯಾದಿ ಮಾಡಿಕೊಂಡಿದ್ದರು. ಆದರೆ ಈ ಹಿಂದೆ ಅವಕಾಶ ನೀಡಿದರಿಗೆ ಮತ್ತೇ ಅವಕಾಶ ನೀಡುವುದು ಬೇಡ ಎಂದು ವಿರೋಧವಾಗಿತು. ಅದಕ್ಕಾಗಿ ಕಾಂಗ್ರೆಸ್ ಸದಸ್ಯರು ತಮ್ಮ ಯಾದಿ ಮಾಡಿಕೊಂಡಿದ್ದರು. ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಲಾ ಹುಲಸ್ವಾರ್ ತಮ್ಮನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಎಂದು ನಗರಸಭೆ ಅಧ್ಯಕ್ಷರಲ್ಲಿ ಕೇಳಿಕೊಂಡರು. ಈ ಸಂದರ್ಭದಲ್ಲಿ ಮಾಲಾ ಹುಲಸ್ವಾರ ಹಾಗೂ ಶಿಲ್ಪಾ ನಡುವೆ ಅಕ್ಷರ ಸಹ ಜಗಳವಾಯಿತು. ಸದಸ್ಯ ಉಲ್ಲಾಸ ಕೇಣಿ, ಮಾಲಾ ಹುಲಸ್ವಾರಗೆ ನೇರ ವಿರೋಧ ಮಾಡಿದ್ದರು.
`ಮಾಲಾ ಅವರ ಹೆಸರನ್ನು ಸ್ಥಾಯಿ ಸಮಿತಿ ಸದಸ್ಯತ್ವ ಪಟ್ಟಿಯಿಂದ ಕೈಬಿಡಿ’ ಎಂದು ಉಲ್ಲಾಸ ಹಾಗೂ ಶಿಲ್ಪಾ ಹೇಳಿದರು. ಆಗ ಮಾಲಾ ಇದಕ್ಕೆ ಮಾಲಾ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದಾಗ `ತಾನು ದಲಿತ ಮಹಿಳೆಯಾಗಿದ್ದರಿಂದ ಅಧ್ಯಕ್ಷ ಸ್ಥಾನ ನೀಡಲು ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ಪರಿಶಿಷ್ಟ ಜಾತಿಗೆ ಅನ್ಯಾಯ ಮಾಡಲಾಗುತ್ತಿದೆ’ ಎನ್ನುವ ವಿಷಯನ್ನು ಮಾಲಾ ಹುಲಸ್ವಾರ್ ಎತ್ತಿದರು. ಇದಕ್ಕೆ ಕಾಂಗ್ರೆಸ್ ಬಹು ಸದಸ್ಯರು `ಬಿಜೆಪಿ ಸದಸ್ಯ ದಲಿತ ಮಹಿಳೆ ಮಾಲಾ ಹುಲಸ್ವಾರ್ ಅವರಿಗೆ ಅಧ್ಯಕ್ಷರನ್ನಾಗಿ ಮಾಡಬೇಕು’ ಎಂದು ಪಟ್ಟು ಹಿಡಿದಿದರು. `ಪರಿಶಿಷ್ಟ ಜಾತಿಯವರಿಗೆ ಅಧ್ಯಕ್ಷರನ್ನಾಗಿ ಮಾಡುವುದಾದರೆ ಬಿಜೆಪಿ ಸದಸ್ಯರ ಹನುಮಂತ ತಳವಾರ್ ನಾನು ಎಸ್ಟಿ. ಯಾವುದೇ ಗೊಂದಲ ಬೇಡ ನನಗೆ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ’ ಎಂದರು. ಇದು ಬಿಜೆಪಿಯನ್ನು ಮತ್ತಷ್ಟು ಗೊಂದಲಕ್ಕೆ ಹಾಕಿತು. ಕೊನೆಗೆ ಬಿಜೆಪಿ ಕೆಲ ಸದಸ್ಯರ ಹಾಗೂ ಕಾಂಗ್ರೆಸಿನ ಹಲವು ಸದಸ್ಯರ ಬೆಂಬಲದೊ0ದಿಗೆ ಮಾಲಾ ಹುಲಸ್ವಾರ್ ಸ್ಥಾಯಿ ಸಮಿತಿ ಅಧ್ಯಕ್ಷರಾದರು.
ಬಿಜೆಪಿ ಸ್ಪಷ್ಟನೆ:
`ಬಿಜೆಪಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಬೆಲೆ ಇಲ್ಲ’ ಎಂದು ಮಾಲಾ ಹುಲಸ್ವಾರ್ ಹೇಳಿದನ್ನು ಬಿಜೆಪಿಗರು ಖಂಡಿಸಿದ್ದಾರೆ. `ಅವರಿಗೆ ಬಿಜೆಪಿ ಎಂದಿಗೂ ಅನ್ಯಾಯ ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಯಡಿಯೂರಪ್ಪ ಅವರು ಸಹ ಮಾಲಾ ಹುಲಸ್ವಾರ್ ಅವರ ಮನೆಗೆ ಆಗಮಿಸಿ ಉಪಹಾರ ಸೇವಿಸಿದನ್ನು ಅವರು ಮರೆತಿದ್ದಾರೆ’ ಎಂದು ಬಿಜೆಪಿಗರು ನೆನಪಿಸಿದ್ದಾರೆ. `ಬಿಜೆಪಿಯಲ್ಲಿ ಅವರಿಗಿಂತ ಹಿರಿಯ ಸದಸ್ಯರಿದ್ದು, ಅವರಿಗೆ ಸ್ಥಾಯಿ ಸಮಿತಿ ಹುದ್ದೆ ಕೊಡುವ ವಿಚಾರ ಇತ್ತು. ಇಲ್ಲಿ ಪರಿಶಿಷ್ಟರಿಗೆ ಅನ್ಯಾಯ ಮಾಡುವ ಉದ್ದೇಶ ಇರಲಿಲ್ಲ’ ಎಂದು ಬಿಜೆಪಿ ಮುಖಂಡರು ಹೇಳಿಕೊಂಡಿದ್ದಾರೆ.