ಯಲ್ಲಾಪುರ: ಬುಡಕಟ್ಟು ಸಮುದಾದವರಿಗೆ ಪೌಷ್ಠಿಕ ಆಹಾರ ವಿತರಣೆ ವಿಷಯವಾಗಿ ಹೊರಡಿಸಿದ ಪ್ರಕಟಣೆಯಲ್ಲಿ `ಸಾಮಾಜಿಕ ಅಂತರ ಕಾಪಾಡಿಕೊಳ್ಳಿ’ ಎಂಬ ಸೂಚನೆ ನೀಡಲಾಗಿದ್ದು, ಮತ್ತೆ ಕೊರೊನಾ ಕಾಟ ಶುರುವಾಗಲಿದೆಯೇ? ಎಂಬ ಪ್ರಶ್ನೆ ಮೂಡಿದೆ.
ಸಮಾಜ ಕಲ್ಯಾಣ ಇಲಾಖೆಯವರು ಜೂನ್ 13ರಿಂದ ಸಿದ್ದಿ ಜನಾಂಗದವರಿಗೆ ಪೌಷ್ಠಿಕ ಆಹಾರ ವಿತರಿಸುತ್ತಿದ್ದಾರೆ. ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಸೂಚನೆ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಿದ್ದು, ಮಂಚಿಕೇರಿ, ಕಂಪ್ಲಿ, ಬಿಳಕಿ, ಹಾಸಣಗಿ, ಉಮ್ಮಚ್ಗಿ, ಕಿರವತ್ತಿ, ಮದನೂರು ಮೊದಲಾದ ಕಡೆ ವಿತರಣೆ ಮುಗಿದಿದೆ. ಇನ್ನೂ ಯಲ್ಲಾಪುರ ಪಟ್ಟಣ ಸೇರಿ ಅನೇಕ ಕಡೆ ಪೌಷ್ಠಿಕ ಆಹಾರ ವಿತರಣೆ ನಡೆಯಬೇಕಿದೆ.
ಅರ್ಹರಿಗೆ ಈಗಾಗಲೇ ನೀಡಿರುವ ಮಾಹಿತಿ ಪ್ರಕಾರ ಎಲ್ಲರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಕಾರ್ಯಕ್ರಮದಲ್ಲಿ ಹೆಚ್ಚು ಜನ ಸೇರುವ ಸಾಧ್ಯತೆಯಿದ್ದು, ರೋಗ ಹರಡುವಿಕೆ ತಡೆಗೆ ಈ ಸೂಚನೆ ನೀಡಲಾಗಿದೆ ಜೊತೆಗೆ ಸ್ವಚ್ಛತೆಗೆ ಆಧ್ಯತೆ ನೀಡುವಂತೆಯೂ ಅಧಿಕಾರಿಗಳು ಮನವಿ ಮಾಡಿದ್ದಾರೆ.
Discussion about this post