ದಾಂಡೇಲಿಯ ವೆಸ್ಟಕೋಸ್ಟ್ ಪೆಪರ್ ಮಿಲ್ಲಿನಲ್ಲಿ ಕಳ್ಳತನ ನಡೆದಿದೆ. ಮೂವರು ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಾರ್ಚ 31ರ ರಾತ್ರಿ 11ಗಂಟೆ ನಂತರ ಏಪ್ರಿಲ್ 1ರ 12.20ರವರೆಗೆ ದಾಂಡೇಲಿಯ ವೆಸ್ಟಕೋಸ್ಟ್ ಪೆಪರ್ ಮಿಲ್ಲಿನೊಳಗೆ ಪ್ರವೇಶಿದ ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಮೋಹನ್ ಹಂಜಿ ಅವರನ್ನು ಕಳ್ಳರು ಯಾಮಾರಿಸಿದ್ದಾರೆ.
ಕಂಪನಿ ಆವರಣದ ಗುಜುರಿ ಯಾರ್ಡಿಗೆ ಭೇಟಿ ನೀಡಿದ ಕಳ್ಳರು ಅಲ್ಲಿನ ಕಂಟೇನರ್ ಬೀಗ ಒಡೆದಿದ್ದಾರೆ. ಅದಾದ ನಂತರ ತಾಮ್ರ ಹಾಗೂ ಹಿತ್ತಾಳೆಯ ಸಾಮಗ್ರಿಗಳನ್ನು ಅಪಹರಿಸಿದ್ದಾರೆ. ಒಟ್ಟು 40 ಸಾವಿರ ರೂ ಮೌಲ್ಯದ ಸಾಮಗ್ರಿಗಳು ಕಾಣೆಯಾಗಿದೆ. ಕಳ್ಳರು ಅಲ್ಲಿಂದ ಹೋದ ನಂತರ ಭದ್ರತಾ ಸಿಬ್ಬಂದಿ ಮೋಹನ ಹಂಜಿ ಅವರಿಗೆ ವಿಷಯ ಗೊತ್ತಾಗಿದೆ.
ಕಂಟೇನರ್ ಬೀಗ ಒಡೆದಿದನ್ನು ನೋಡಿ ಅವರು ಸೆಕ್ಯುರಿಟಿ ಮ್ಯಾನೇಜರ್ ಸದಾನಂದ ಪಟೇಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಸದಾನಂದ ಪಟೇಲ್ ಅವರು ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಮೂವರು ಕಳ್ಳರು ಬಂದು ಹೋಗಿರುವುದು ಗೊತ್ತಾಗಿದೆ. ಈ ಹಿನ್ನಲೆ ಅವರು ದಾಂಡೇಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. `ಆ ಕಳ್ಳರನ್ನು ಹುಡುಕಿ, ಕಳ್ಳತನವಾದ ಸಾಮಗ್ರಿಗಳನ್ನು ಮರಳಿಸಿ’ ಎಂದವರು ಪೊಲೀಸರಲ್ಲಿ ಕೋರಿಕೊಂಡಿದ್ದಾರೆ.