ಮುಂಡಗೋಡ: ನೆಹರುನಗರದ ಪ್ರಕಾಶ ಭಸ್ಮೆ (36) ಕಾಣೆಯಾಗಿದ್ದಾರೆ.
ಬುದ್ದಿಮಾಂದ್ಯರಾಗಿರುವ ಅವರು ಆಗಾಗ ಎಲ್ಲಾದರೂ ಹೋಗುತ್ತಿದ್ದರು. ಅದಾದ ಕೆಲ ಹೊತ್ತಿನ ಬಳಿಕ ಮನೆಗೆ ಮರಳುತ್ತದ್ದರು. ಆದರೆ, ಡಿ 12ರಂದು ಮನೆ ಬಿಟ್ಟು ಹೋದ ಅವರು ಈವರೆಗೂ ಮರಳಿ ಬಂದಿಲ್ಲ.
ಎಲ್ಲಾ ಕಡೆ ಹುಡುಕಾಡಿದರೂ ಪ್ರಕಾಶ ಅವರ ಸುಳಿವು ಸಿಕ್ಕಿಲ್ಲ. ಹೀಗಾಗಿ ಅವರನ್ನು ಹುಡುಕಿಕೊಡುವಂತೆ ಸಹೋದರ ಸಂದೀಪ ಭಸ್ಮೆ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಇದೀಗ ಪ್ರಕಾಶ ಅವರ ಹುಡುಕಾಟ ನಡೆಸಿದ್ದಾರೆ.