ಯಲ್ಲಾಪುರ: ಹೊಸಳ್ಳಿಯ ಮಾರುತಿ ದೇವಾಲಯದ ಆವರಣದಲ್ಲಿ ಕಬ್ಬಡ್ಡಿ ಆಟ ನಡೆದಿದ್ದು, ಹೊನಲು ಬೆಳಕಿನ ರಾತ್ರಿಯಿಡೀ ನಡೆದ ಈ ಪಂದ್ಯಾವಳಿಗೆ ಸಾವಿರ ಸಂಖ್ಯೆಯ ಜನ ಸಾಕ್ಷಿಯಾದರು. ಶನಿವಾರ ಸಂಜೆ 4 ಗಂಟೆಗೆ ಶುರುವಾದ ಕಬ್ಬಡ್ಡಿ ಕ್ರೀಡೆ ಭಾನುವಾರ ಬೆಳಗ್ಗೆ 11 ಗಂಟೆಯವರೆಗೂ ನಡೆದಿದ್ದು, ಈ ಪಂದ್ಯಾವಳಿಯಲ್ಲಿ ಮುಂಡಗೋಡಿನ ಮೈನಳ್ಳಿ ತಂಡದವರು ಮೊದಲ ಬಹುಮಾನ ಪಡೆದರು.
ಹೊಸಳ್ಳಿ ಭಾಗದ ಗ್ರಾಮಸ್ಥರೆಲ್ಲರೂ ಸೇರಿ ಪ್ರತಿ ವರ್ಷ ಮಣ್ಣಿನ ನೆಲದಲ್ಲಿ ಕಬ್ಬಡ್ಡಿ ಪಂದ್ಯ ಆಡಿಸುತ್ತ ಬಂದಿದ್ದಾರೆ. ಕ್ರೀಡೆಗೆ ಉತ್ತೇಜನ, ಸಂಘಟನೆ, ಗ್ರಾಮದಲ್ಲಿ ಸಾಮರಸ್ಯ ಕಾಪಾಡುವ ಉದ್ದೇಶದಿಂದ ಮೊದಲಿನಿಂದಲೂ ಕ್ರೀಡಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಈ ಬಾರಿ ಇದೇ ಮೊದಲ ಬಾರಿಗೆ ಪ್ರೋ ಮಾದರಿಯಲ್ಲಿ ಮ್ಯಾಟ್ ಅಳವಡಿಸಿ ಕಬ್ಬಡ್ಡಿ ಆಟ ನಡೆಯಿತು.
ಈ ಪಂದ್ಯಾವಳಿಯಲ್ಲಿ 30 ತಂಡದವರು ಭಾಗವಹಿಸಿದ್ದರು. ಈ ಪೈಕಿ ಕೊನೆಕ್ಷಣದವರೆಗೂ ಪೈಪೋಟಿ ನೀಡಿದ ಹಾಂಗ್ಯೋ ಬಾಯ್ಸ್ ಹೊಸಳ್ಳಿ ತಂಡದವರು ದ್ವಿತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು. ಹಳಿಯಾಳ ತಾಲೂಕಿನ ಭಾಗವತಿ ತಂಡದವರು ತೃತೀಯ ಹಾಗೂ ಕೋಳಿಕೇರಿ ದೇಶಪಾಂಡೆ ನಗರದ ತಂಡದವರು ನಾಲ್ಕನೇ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಗಣ್ಯರ ಆಗಮನ
ಯಲ್ಲಾಪುರ ಅರಣ್ಯವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ ಪಿ ಪಂದ್ಯಾವಳಿ ಉದ್ಘಾಟಿಸಿ ಕಬ್ಬಡ್ಡಿ ಆಟ ನೋಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ವಡ್ದರ್ ಅವರ ಜೊತೆಯಾದರು. ಅರಣ್ಯಾಧಿಕಾರಿಗಳಾದ ಭಾಗ್ಯಶ್ರೀ ಬಿರಾದರ್, ಅಜಯ್ ನಾಯ್ಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದರು. ದೊಡ್ಲಾ ಡೈರಿ ಲಿಮಿಟೆಡ್’ನ ಪ್ರಕಾಶ್, ಹಾಂಗ್ಯೋ ಐಸ್ ಕ್ರಿಮ್’ನ ಮ್ಯಾನೇಜರ್ ವೀರಕುಮಾರ ಪಾಟೀಲ್, ಗ್ರಾ ಪಂ ಅಧ್ಯಕ್ಷೆ ಸಂಗೀತಾ ಕೋಕರೆ, ಗ್ರಾ ಪಂ ಸದಸ್ಯರಾದ ಜಗ್ಗು ಹುಂಬೆ, ಸುನಿಲ ಕಾಂಬಳೆ, ಪ್ರಮುಖರಾದ ರೆಹಮತ್ ಅಬ್ಬಿಗೇರಿ, ಬಾಬು ಜಾನಕರ್, ಕಲ್ಲಪ್ಪ ಹೋಳಿ, ಅರ್ಜುನ್ ಬೆಂಗೇರಿ, ಮೌಲಾಲಿ ಮುಜಾವರ್, ಮಂಜುನಾಥ ಕೊರವರ್, ಕೇಶವ ಕಾಂಬಳೆ, ಶಂಕರ ಕಾಂಬಳೆ, ಮೌಲಾಲಿ ಶೇಖ್, ನಾರಾಯಣ ಕಾಂಬಳೆ, ದರ್ಗಪ್ಪ ದಂಡಾಪುರ, ಪ್ರಕಾಶ್ ಮಿಂಡೊಳ್ಳಿ ಇತರರು ಇದ್ದರು. ಆರಕ್ಷಕ ಸಿಬ್ಬಂದಿ ರಾಘವೇಂದ್ರ ಮೂಳೆ ಭದ್ರತೆಯ ಜವಾಬ್ದಾರಿ ನೋಡಿಕೊಂಡರು. ಊರಿನವರೆಲ್ಲ ಸೇರಿ ಗಣ್ಯರನ್ನು ಗೌರವಿಸಿದರು.
ಬಹುಮಾನಗಳ ಪ್ರಾಯೋಜಕರು
ಪಂದ್ಯಾವಳಿಯ ಪ್ರಥಮ ಬಹುಮಾನ ಗೆದ್ದವವರಿಗೆ ಗ್ರಾ ಪಂ ಸದಸ್ಯ ರಹಮತ್ ಅಬ್ಬಿಗೇರಿ ನಗದು ಬಹುಮಾನ ನೀಡಿದರು. ಗ್ರಾ ಪಂ ಸದಸ್ಯ ಸುನೀಲ ಕಾಂಬಳೆ ಟ್ರೋಪಿ ನೀಡಿದರು. ಗ್ರಾ ಪಂ ಸದಸ್ಯೆ ನಯನಾ ಶೆಂಡಗೆ ದ್ವಿತೀಯ ಬಹುಮಾನ ವಿತರಿಸಿದರು. ದೊಡ್ಲ ಡೈರಿಯವರು ತೃತೀಯ ಬಹುಮಾನದ ನಗದು ಹಾಗೂ ಸಿದ್ದಿ ಬುಡಕಟ್ಟು ಜನಪರ ಸಂಘದ ಅನಿಲ ಸಿದ್ದಿ ಈ ಬಹುಮಾನದ ಟ್ರೋಪಿ ವಿತರಿಸಿದರು. ಕಾಂಗ್ರೆಸ್ ಸೇವಾದಳದ ಬ್ಲಾಕ್ ಅಧ್ಯಕ್ಷ ವಸಂತ ಕೂಗನವರ್ ನಾಲ್ಕನೇ ಬಹುಮಾನದ ಟ್ರೋಪಿ ಹಾಗೂ ಎಚ್ ಕೆ ಜಿ ಎನ್ ಟೈಲ್ಸ್ ಟ್ರೇರ್ಸ್’ನವರು ನಗದು ಬಹುಮಾನವನ್ನು ಪ್ರಾಯೋಜಿಸಿದ್ದರು.