ಯಲ್ಲಾಪುರ: ಪಟ್ಟಣದ ದಾತ್ರಿ ನಗರಕ್ಕೆ ಹೊಂದಿಕೊoಡಿರುವ ಹಿತ್ಲಕಾರಗದ್ದೆಯಲ್ಲಿ ಶುದ್ಧ ನೀರಿನ ಜೊತೆ ಚರಂಡಿ ನೀರು ಮಿಶ್ರಣವಾಗುತ್ತಿದೆ. ಇದರಿಂದ ದಾತ್ರಿ ನಗರದಲ್ಲಿ ವಾಸಿಸುವವರಿಗೆ ನಿತ್ಯ ತೊಂದರೆ ಆಗುತ್ತಿದ್ದು, ಈ ಬಗ್ಗೆ ಬುಧವಾರ ಸಂಜೆ ಜಮಾಯಿಸಿದ ಜನ ಇದಕ್ಕೆ ಕಾರಣರಾದವರ ವಿರುದ್ಧ ಕಿಡಿಕಾರಿದರು.
ಕೆಲವರು ಅನಾಧಿಕಾಲದಿಂದಲೂ ಇದ್ದ ಕಾಲುವೆಗೆ ಮಣ್ಣು ತುಂಬಿದ್ದಾರೆ. ಬೇರೆ ಜಾಗದಲ್ಲಿ ಹೊಸದಾಗಿ ಕಾಲುವೆ ತೆರೆದಿದ್ದಾರೆ. ಇದೇ ಸಮಸ್ಯೆಗೆ ಮೂಲ ಕಾರಣ’ ಎಂದು ಅಲ್ಲಿ ನೆರೆದಿದ್ದವರು ಹೇಳಿದರು. `ವೈಜ್ಞಾನಿಕ ರೀತಿಯಲ್ಲಿ ಇದ್ದ ಕಾಲುವೆ ಮುಚ್ಚಿ, ಮಳೆಗಾಲದಲ್ಲಿ ಎಲ್ಲಡೆ ನೀರು ಸಂಗ್ರಹವಾಗುವoತೆ ಮಾಡಲಾಗಿದೆ. ಇದರಿಂದ ಹಿತ್ಲಕಾರಗದ್ದೆಯಲ್ಲಿರುವ ಕೃಷಿಭೂಮಿಗೂ ತೊಂದರೆ ಉಂಟಾಗಿದೆ’ ಎಂದು ದೂರಿದರು.
Discussion about this post