ಯಲ್ಲಾಪುರ: ಪೆಟ್ರೋಲ್ ಬಂಕಿನ ಬಳಿ ನಿಲ್ಲಿಸಿದ್ದ ಟ್ಯಾಂಕರ್’ನಲ್ಲಿ ಕಳ್ಳತನ ನಡೆದಿದೆ. ಟ್ಯಾಂಕರ್ ಮುಚ್ಚಳವನ್ನು ಒಡೆದ ಕಳ್ಳರು ಅದರಲ್ಲಿದ್ದ ಡೀಸೆಲ್ ಕದ್ದಿದ್ದಾರೆ!
ಹೊಸಳ್ಳಿಯ ಗೌಳಿವಾಡದ ಭಾಗು ಪೊಂಡೆ ಎಂಬಾತರು ಈ ಟ್ಯಾಂಕರ್ ಚಾಲಕರಾಗಿದ್ದರು. ಅವರು ಹೊಸಳ್ಳಿ ಪೆಟ್ರೋಲ್ ಬಂಕ್ ಬಳಿ ಡಿ 21ರ ರಾತ್ರಿ ಟ್ಯಾಂಕರ್ ನಿಲ್ಲಿಸಿದ್ದರು. ಮರು ದಿನ ಬೆಳಗ್ಗೆ 7 ಗಂಟೆಗೆ ಬಂದು ನೊಡಿದಾಗ ಡೀಸೆಲ್ ಕಳ್ಳತನವಾಗಿರುವುದು ಗಮನಕ್ಕೆ ಬಂದಿತು.
ಟ್ಯಾಂಕರಿನ ಮುಚ್ಚಲವನ್ನು ಮೀಟಿದ ಕಳ್ಳರು 320 ಲೀಟರ್ ಡೀಸೆಲ್ ಅಪಹರಿಸಿದ್ದರು. ಇದರಿಂದ 28534ರೂ ಮೌಲ್ಯ ನಷ್ಟವಾಗಿರುವ ಬಗ್ಗೆ ಭಾಗು ಪೊಂಡೆ ಪೊಲೀಸ್ ದೂರು ನೀಡಿದ್ದಾರೆ. ಕಳ್ಳರನ್ನು ಹುಡುಕುವಂತೆ ಕೋರಿ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.