ಹಲವು ಬಗೆಯ ಡಿಜಿಟಲ್ ಸೌಕರ್ಯವನ್ನು ಹೊಂದಿದ ಯಲ್ಲಾಪುರದ ಸವಣಗೇರಿ ಸರ್ಕಾರಿ ಶಾಲೆ ಡಿಜಿಟಲ್ ಬ್ಯಾಂಕಿ0ಗ್ ಪದ್ಧತಿಯನ್ನು ಸಹ ಅಳವಡಿಸಿಕೊಂಡಿದೆ.
ಈ ಶಾಲೆಗೆ ಇನ್ನಷ್ಟು ಸೌಕರ್ಯ ಒದಗಿಸುವ ಉದ್ದೇಶಕ್ಕಾಗಿ ಸುಬ್ರಾಯ ಮಹಾಬಲೇಶ್ವರ ಭಟ್ಟ ಹಾಗೂ ನಾರಾಯಣ ಗಣಪತಿ ಹೆಗಡೆ ಅವರು ಆರ್ಥಿಕ ನೆರವು ನೀಡಿದ್ದಾರೆ. ಸುಬ್ರಾಯ ಭಟ್ಟ ಹಾಗೂ ನಾರಾಯಣ ಹೆಗಡೆ ಅವರು ಈಚೆಗೆ ಶಾಲೆಗೆ ಭೇಟಿ ನೀಡಿದ್ದರು. ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಇಂಟರ್ನೆಟ್ ವ್ಯವಸ್ಥೆ, ನೂತನ ಕಟ್ಟಡ ನಿರ್ಮಾಣ ಹಾಗೂ ಆಧುನಿಕ ಸೌಕರ್ಯಗಳನ್ನು ಅಳವಡಿಸಿಕೊಂಡಿರುವುದನ್ನು ಗಮನಿಸಿದರು. ತಾವು ಕಲಿತ ಶಾಲೆಗೆ ಕೊಡುಗೆ ನೀಡಬೇಕು ಎಂದು ನಿರ್ಧರಿಸಿ ಮಕ್ಕಳಿಗೆ ಇನ್ನಷ್ಟು ಸೌಕರ್ಯ ಒದಗಿಸುವ ದೃಷ್ಠಿಯಿಂದ ಶಾಲಾ ಖಾತೆಗೆ ಆರ್ಥಿಕ ನೆರವು ನೀಡಿದರು.
ಸುಬ್ರಾಯ ಭಟ್ಟ ಅವರು ಶಾಲಾ ಎಸ್ಡಿಎಂಸಿ ಖಾತೆಗೆ 25001ರೂ ಹಣವನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ. ನಾರಾಯಣ ಹೆಗಡೆ ಅವರು ಶಾಲೆಗೆ ಭೇಟಿ ನೀಡಿದ ಅವಧಿಯಲ್ಲಿ 5112ರೂಪಾಯಿಗಳನ್ನು ಶಾಲೆಯ ಖಾತೆಗೆ ಜಮಾ ಮಾಡಿದ್ದಾರೆ. ಮುಂದಿನ ದಿನದಲ್ಲಿ ಇನ್ನಷ್ಟು ನೆರವು ನೀಡುವುದಾಗಿ ಅವರಿಬ್ಬರು ಘೋಷಿಸಿದರು. ಶಾಲೆಗೆ ಆರ್ಥಿಕ ನೆರವು ನೀಡಿದಕ್ಕಾಗಿ ಶಿಕ್ಷಕರು ಹಾಗೂ ಊರಿನವರು ಸಂತಸ ವ್ಯಕ್ತಪಡಿಸಿದರು.