ದಾಂಡೇಲಿ: ಗಾಂಧಿನಗರದ ಅಭಿಷೇಕ್ ಮಾಶಾಲ (24 ವರ್ಷ) ಹಾಗೂ ಆಕಾಶ ಮಂದೆವಾಳಿ (21) ಎಂಬಾತರು ಸಿಗರೇಟಿನ ರೂಪದಲ್ಲಿರುವ ಗಾಂಜಾ ಸೇದುತ್ತಿರುವಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿರುವ ಅಭಿಷೇಕ್ ಮಾಶಾಲ್ ಜುಲೈ 14ರಂದು ಸಾರ್ವಜನಿಕ ರಂಗಮoದಿರದ ಒಳಗೆ ಕುಳಿತು ಸಿಗರೇಟಿನಿಂದ ಹೊಗೆ ಬಿಡುತ್ತಿದ್ದ. ಆತನ ನಶೆ ನೋಡಿ ಅನುಮಾನಗೊಂಡ ಪಿಸೈ ಯಲ್ಲಪ್ಪ ಹತ್ತಿರ ಹೋಗಿ ವಿಚಾರಿಸಿದಾಗ ಸಿಗರೇಟಿನ ಸೀಸದಲ್ಲಿ ಗಾಂಜಾ ಪತ್ತೆಯಾಗಿದೆ.
ಅಂಬೇವಾಡಿಯ ರೈಲ್ವೆ ಗೇಟ್ ಬಳಿ ಗಾಂಧಿನಗರದ ಚಾಲಕ ಆಕಾಶ ಮಂದೆವಾಲಿ (21 ವರ್ಷ) ಸಹ ಸಿಗರೇಟು ಸೇದುವಾಗ ಪಿಸೈ ಐ ಆರ್ ಗಡ್ಡೆಕರ್ ಅವರ ಬಳಿ ಸಿಕ್ಕಿಬಿದ್ದಿದ್ದು, ಆತನ ಬಳಿಯಿದ್ದ ಅರ್ದ ಸೇದಿದ ಸಿಗರೇಟಿನ ಒಳಗೆ ಗಾಂಜಾ ಪುಡಿಗಳು ಕಂಡುಬoದಿದೆ. ಪೊಲೀಸರು ಕೂಡಲೇ ಇಬ್ಬರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಈ ಇಬ್ಬರು ಗಾಂಜಾ ನಶೆಯಲ್ಲಿದ್ದ ಬಗ್ಗೆ ವೈದ್ಯಾಧಿಕಾರಿಗಳು ದೃಢಪಡಿಸಿದ್ದಾರೆ.
Discussion about this post