ಯಲ್ಲಾಪುರ: ಭಾನುವಾರ ಸಂಜೆ ನಡೆದ ಉರುಸ್ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ. ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಾಲಕ ಹಾಗೂ ಇನ್ನೊಬ್ಬರಿಗೆ ಕಲ್ಲು ತಾಗಿದೆ. ಯಾರಿಗೂ ಗಾಯಗಳಾಗಿಲ್ಲ.
ಲಭ್ಯವಿರುವ ಪ್ರಾಥಮಿಕ ಮಾಹಿತಿ ಪ್ರಕಾರ ದೇವಿ ದೇವಸ್ಥಾನ ರಸ್ತೆ ಬಳಿ ಮೆರವಣಿಗೆ ಚಲಿಸುತ್ತಿದ್ದಾಗ ನಾಲ್ಕೆದು ಕಲ್ಲುಗಳು ತೂರಿ ಬಂದಿವೆ. ಅದರಲ್ಲಿ ಒಂದು ಕಲ್ಲು ಬಾಲಕನ ಮೈಗೆ ತಾಗಿದೆ. ಇನ್ನೊಂದು ಕಲ್ಲು ವೃದ್ಧರೊಬ್ಬರ ಕಾಲಿಗೆ ತಾಗಿದೆ. ಕಲ್ಲು ಬೀಸಿದ ವ್ಯಕ್ತಿಯನ್ನು ಅಲ್ಲಿದ್ದವರು ಹಿಡಿದಿದ್ದು, ಆತ ಈ ವೇಳೆ ಮದ್ಯದ ನಶೆಯಲ್ಲಿದಿದ್ದನ್ನು ಸ್ಥಳೀಯರು ಗಮನಿಸಿದ್ದಾರೆ. ಆತ ಇನ್ನಷ್ಟು ಕಲ್ಲು ಬೀಸುವುದನ್ನು ತಡೆದಿದ್ದಾರೆ. `ಮತ್ತೆ ಈ ರೀತಿ ಮಾಡಬೇಡ’ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಕಿತ್ತೂರು ಶಾಮಿಯಾನದ ಬಳಿಯ ಕತ್ತಲಿನ ಪ್ರದೇಶದಲ್ಲಿ ಏಕಾಏಕಿ ಕಲ್ಲು ತೂರಿ ಬಂದಿರುವದರಿ0ದ ಮೆರವಣಿಗೆಯಲ್ಲಿದ್ದವರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು. ನಂತರ ಇದು `ಕುಡುಕ ಮಾಡಿದ ಕಿತಾಪತಿ’ ಎಂದು ಅರಿತು ಸುಮ್ಮನಾದರು. ಉರುಸ್ ಕಾರ್ಯಕ್ರಮದ ಯಶಸ್ಸಿಗೆ ಹೆಚ್ಚಿನ ಕಾಳಜಿವಹಿಸಿರುವ ಉರುಸ್ ಸಮಿತಿಯವರು ಕಿಡಿಗೇಡಿಯ ಕೃತ್ಯದ ಬಗ್ಗೆ ದೂರು ನೀಡಲು ಆಸಕ್ತಿವಹಿಸಿಲ್ಲ. ಅದಾಗಿಯೂ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡ ವ್ಯಕ್ತಿಯ ನಶೆ ಇಳಿಸಿದ್ದಾರೆ.