ಭಟ್ಕಳ: ಸ್ನೇಹಿತನ ಅತ್ತೆ ಮನೆಗೆ ತೆರಳಿದ್ದ ದುಬೈ ಉದ್ಯೋಗಿ ಮಹ್ಮದ್ ಅಜಿಯಾದ ಚಾಮುಂಡಿ ಮೇಲೆ ಹಲ್ಲೆ ನಡೆದಿದೆ.
ಮಂಗಳೂರಿನ ಮಹ್ಮದ್ ಅಜಿಯಾದ ಚಾಮುಂಡಿ ಅವರು ನ 3ರಂದು ತಮ್ಮ ಸ್ನೇಹಿತ ಅಬ್ದುಲ್ ಹಮೀದ್ ಗವಾಯಿ ಅವರ ಮನೆಗೆ ಬಂದಿದ್ದು, ಅವರ ಜೊತೆ ಅತ್ತೆ ಮನೆಗೆ ಹೋಗಿದ್ದರು. ಆಗ ಅಲ್ಲಿಗೆ ಬಂದ ಸಿದ್ಧಿಕಿಸ್ಟೀಟ್’ನ ಕಾಲಮಟ್ಟಿ ಬಳಿಯ ಅಬು ಮಹಮದ್, ಪುರ್ಕಾನ್ ಡಿಎಫ್, ಮಹಮದ್ ಫಾರುಖ್, ಸಲ್ಮಾನ್ ಶಾರ್ಲಿ, ಸೈರೋಜ್ ಪುರ್ಕಾನ್ ಹಾಗೂ ಇನ್ನಿತರ ಅಪರಿಚಿತರು ಮಹ್ಮದ್ ಮೇಲೆ ದಾಳಿ ನಡೆಸಿದರು.
ಮಹ್ಮದ್ ಅವರ ಕಾಲು ಹಿಡಿದ ಎಲ್ಲರೂ ಅವರನ್ನು ಜೋರಾಗಿ ಎಳೆದರು. ಕಾಲು ತಿರುಗಿಸಿ ಪೆಟ್ಟು ಮಾಡಿದರು. ಈ ವೇಳೆ ಹೊಡೆದಾಟ ಬಿಡಿಸಲು ಬಂದ ಜಿಶಾನ್ ಸಂಶುದ್ಧಿನ್ ಅಲಿ ಅಕ್ಬರ್ ಅವರಿಗೂ ದುಷ್ಕರ್ಮಿಗಳು ಬೆದರಿಕೆ ಒಡ್ಡಿದರು. ಈ ಬಗ್ಗೆ ಮಹ್ಮದ್ ಅಜಿಯಾದ ಚಾಮುಂಡಿ ಪೊಲೀಸ್ ದೂರು ನೀಡಿದ್ದಾರೆ.