ಶಿರಸಿಯ ದಾಸನಕೊಪ್ಪ ಹಾಗೂ ಅಂಡಗಿಯಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತಿರುವುದರಿಂದ ಜನ ರೊಚ್ಚಿಗೆದ್ದಿದ್ದಾರೆ. ಅದಾಗಿಯೂ ಮಂಗಳವಾರ ಶಾಂತಿಯುತ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ.
`ರೈತರ ಭೂಮಿಗಳಿಗೆ ನೀರುಣಿಸಲು ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ. ಇದರಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗುತ್ತಿದೆ’ ಎಂದು ರೈತ ಸಂಘದ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಸಭೆಯ ಗಮನ ಸೆಳೆದರು. `ಇನ್ನೂ ಒಂದು ವಾರದ ಒಳಗೆ ಈ ಸಮಸ್ಯೆ ಬಗೆಹರಿಸುವೆ’ ಎಂದು ಹೆಸ್ಕಾಂ ಎಇಇ ನಾಗರಾಜ್ ಪಾಟೀಲ್ ಭರವಸೆ ನೀಡಿದ್ದರಿಂದ ರೈತರು ಸುಮ್ಮನಾದರು.
ವಿ ಎಸ್ ಎಸ್ ಕಾಳಂಗಿ, ರಾಜು ಗೌಡ ವದ್ದಲ್, ಪ್ರಶಾಂತ್ ಗೌಡ, ಮಂಜುನಾಥ್ ಬಿ ನಾಯ್ಕ, ಸುದರ್ಶನ್ ದೊಡ್ಮನೆ, ಸಿ ಬಿ ಗೌಡ ಮೊದಲಾದ ಮುಖಂಡರು ವಿದ್ಯುತ್ ಸಮಸ್ಯೆಯ ಬಗ್ಗೆ ವಿವರಿಸಿದರು. ರಾಮಣ್ಣ ಕಲಕರಡಿ ಉಮೇಶ್ ಗೌಡ್ರು ಕಾಳಂಗಿ, ಸುರೇಶ್ ಜಕ್ಕನ್ನನವರ್, ಶಶಿಕುಮಾರ್ ಉಮ್ಮಡಿ, ನಾಗರಾಜ ಡಾಂಗೆ, ಮೋಹನ್ ಕಿರುವತ್ತಿ ಸೇರಿ ಹಲವರು ರೈತರು ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ಕೂಡಲೇ ಈ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಆ ಭಾಗದ ರೈತರು ತಾಕೀತು ಮಾಡಿದರು. `ಹಾನಗಲ್’ನಿಂದ ಬಂದಿರುವ ವಿದ್ಯುತ್ ಮಾರ್ಗದ ಬದಲಾಗಿ ಸಿರ್ಸಿಯಿಂದ ನೇರವಾಗಿ ಸಂಪರ್ಕ ಕಲ್ಪಿಸಿ ಸಮಸ್ಯೆ ಬಗೆಹರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಆದ ನಂತರ ಸಮಸ್ಯೆ ದೂರವಾಗಲಿದೆ’ ಎಂದು ಸಭೆಯಲ್ಲಿದ್ದ ಅಧಿಕಾರಿಗಳು ಸಮಾಧಾನ ಮಾಡಿದರು.