ಅಂಕೋಲಾ: ಮಾಸ್ತಿಕಟ್ಟಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಟ್ಯಾಂಕರ್ ನಡುವೆ ಅಪಘಾತವಾಗಿದೆ. ಈ ಅಪಘಾತದಲ್ಲಿ ಲಾರಿ ಚಾಲಕನ ಕಾಲಿಗೆ ಪೆಟ್ಟಾಗಿದೆ.
ಡಿ 19ರ ರಾತ್ರಿ 10.45ಕ್ಕೆ ಹಾಸನದ ಇಸ್ಮಾಯಲ್ ಎಂಬ ಚಾಲಕ ಲಾರಿ ಓಡಿಸುತ್ತಿದ್ದ. ಆತ ಕುಮಟಾದಿಂದ ಅಂಕೋಲಾ ಕಡೆ ಚಲಿಸುತ್ತಿದ್ದು, ಮಾಸ್ತಿಕಟ್ಟಾದಲ್ಲಿ ಎದುರಿಗಿನಿಂದ ಬಂದ ಟ್ಯಾಂಕರಿಗೆ ಲಾರಿ ಗುದ್ದಿದ. ರಸ್ತೆ ಮೇಲೆ ಕೆಟ್ಟು ನಿಂತ ಲಾರಿಗೆ ಅಪಘಾತವಾಗುವುದನ್ನು ತಪ್ಪಿಸುವ ಬರದಲ್ಲಿ ಆತ ರಸ್ತೆ ಮೇಲೆ ಚಲಿಸುತ್ತಿದ್ದ ಟ್ಯಾಂಕರಿಗೆ ತನ್ನ ವಾಹನ ಡಿಕ್ಕಿ ಮಾಡಿದ. ಈ ಅಪಘಾತದಿಂದ ಇಸ್ಮಾಯಲ್ ಕಾರಿಗೆ ಪೆಟ್ಟಾಗಿದೆ. ಟ್ಯಾಂಕರ್ ಕ್ಲೀನರ್ ಸೂಫಿ ಸಯ್ಯದ್ ಅಪಘಾತದ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.