ದಾಂಡೇಲಿಯ ಸರ್ಕಾರಿ ಜಾಗ ಅತಿಕ್ರಮಿಸಿ ಮನೆ ನಿರ್ಮಿಸಿಕೊಂಡವರಿಗೆ ನಗರಸಭೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಶನಿವಾರ ಅಕ್ರಮ ಮನೆ, ಶೆಡ್ಡು ಹಾಗೂ ಕಪೌಂಡ್ಗಳನ್ನು ನಗರಸಭೆ ಸಿಬ್ಬಂದಿ ಧ್ವಂಸ ಮಾಡಿದ್ದಾರೆ.
ದಾಂಡೇಲಿ ನಗರದ ಅಂಬೇವಾಡಿಯ ಜಿ+2 ಆಶ್ರಯ ಕಾಲೋನಿ ಬಳಿ ಅನೇಕರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರು. ಶನಿವಾರ ಅಲ್ಲಿ ದಾಳಿ ನಡೆಸಿದ ನಗರಸಭೆಯವರು 22 ಮನೆಗಳನ್ನು ತೆರವು ಮಾಡಿದರು. ಬೆಳಗ್ಗೆ 7 ಗಂಟೆಗೆ ಅಧಿಕಾರಿ-ಸಿಬ್ಬಂದಿ ಆಗಮಿಸಿ ತೆರವು ಕಾರ್ಯಾಚರಣೆ ನಡೆಸಿದರು.
`ಸರ್ಕಾರಿ ಜಾಗ ಅತಿಕ್ರಮಿಸುವುದು ಅಪರಾಧ’ ಎಂದು ಈ ಹಿಂದೆಯೇ ನಗರಸಭೆಯವರು ಹೇಳಿದ್ದರು. ಆದರೂ, ಅತಿಕ್ರಮಣದಾರರು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆ ಜಾಗವನ್ನು ಸಹ ತೆರವು ಮಾಡಿರಲಿಲ್ಲ. ಹೀಗಾಗಿ ನಗರಸಭೆಯವರು ಶನಿವಾರ ಕಾರ್ಯಾಚರಣೆ ನಡೆಸಿ ಅತಿಕ್ರಮಣ ತೆರವು ಮಾಡಿದರು.
ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆ ಸೂಚನೆ ಪ್ರಕಾರ ಪೌರಾಯುಕ್ತರು ಹಾಗೂ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದರು. ನಗರಸಭೆಯ ವ್ಯಸ್ತಾಪಕ ಪರಶುರಾಮ ಸಿಂದೆ, ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಾಗೇಂದ್ರ ದೊಡ್ಡಮನಿ, ಸಿಬ್ಬಂದಿ ಶುಭಂ ರಾಯ್ಕರ ಸ್ಥಳಕ್ಕೆ ಭೇಟಿ ನೀಡಿದರು