ಕುಮಟಾ: ಗೋಕರ್ಣ ಮಾರುಕಟ್ಟೆಯಲ್ಲಿ ಸಣ್ಣ ಮೊಗೆಕಾಯಿ 50ರೂ ಹಾಗೂ ಪ್ರತಿಯೊಂದು ಅರಶಿನ ಎಲೆ 20ರೂ ದರದಲ್ಲಿ ಮಾರಾಟವಾಗುತ್ತಿದೆ.
ದೀಪಾವಳಿ ಹಿನ್ನಲೆ ಜನ ಬೆಲೆ ಲೆಕ್ಕಿಸದೇ ಅಗತ್ಯ ವಸ್ತು ಖರೀದಿಸಿದರು. ಮೊಗೆಕಾಯಿ, ಸವತೆಕಾಯಿ ಜೊತೆ ಹಿಂಡಲೆಕಾಯಿ ಜೊತೆ ಬಳ್ಳಿ ಸಹ ಮಾರಾಟಕ್ಕೆ ಬಂದಿದೆ. ಬುಧವಾರವೇ ಅದನ್ನು ಖರೀದಿಸಿದ ಜನ ಅಬ್ಬಿಯನ್ನು ಅಲಂಕರಿಸಿ ಹಂಡೆಗೆ ಪೂಜೆ ಸಲ್ಲಿಸಿ ಎಣ್ಣೆ ಸ್ನಾನ ಮಾಡಿದರು.
ಹಿಂಡಲಕಾಯಿಯಲ್ಲಿ ದೀಪ ಬೆಳಗುವ ವಾಡಿಕೆಯಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಬಿದ್ರಗೇರಿ, ಕಡಮೆ, ಅಗ್ರಗೋಣ, ಜುಗಾ ಭಾಗದ ಹಾಲಕ್ಕಿ ಮಹಿಳೆಯರು ತಲೆಮೇಲೆ ಹೊತ್ತು ದೀಪಾವಳಿ ಹಬ್ಬದ ಸಾಮಗ್ರಿ ತಂದು ಮಾರಾಟ ಮಾಡುತ್ತಿದ್ದಾರೆ. ಗಂಜಿಗದ್ದೆಯ ಬೀದಿ ಬೀದಿಯಲ್ಲಿ ಸಾವಯವ ತರಕಾರಿ ಮಾರುಕಟ್ಟೆ ಕಾಣಿಸುತ್ತಿದೆ.