ಕಾರವಾರ ಗೋಪಿಶೆಟ್ಟಾ ಮೂಲದ ಲಕ್ಷ್ಮಣ ನಾಯ್ಕ ತಮ್ಮ 52ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಸಾರದಲ್ಲಿನ ಸಮಸ್ಯೆಯಿಂದ ಬೇಸತ್ತ ಅವರು ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ.
ಗೋಪಿಶೆಟ್ಟಾದ ಬರ್ನವಾಡ ಲಕ್ಷ್ಮಣ ಗಣಪತಿ ನಾಯ್ಕ ಅವರು ಅಸ್ನೋಟಿಯಲ್ಲಿ ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಬಿದ್ದಿದ್ದರು. ಇದೇ ವಿಷಯದಲ್ಲಿ ಅವರ ಕುಟುಂಬದಲ್ಲಿ ವೈಮನಸ್ಸು ಮೂಡಿತ್ತು.
ಫೆ 4ರ ಸಂಜೆ ಮನೆಯಲ್ಲಿ ಅವರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಈ ವೇಳೆ ಅವರು ನೈಲಾನ್ ಹಗ್ಗ ಪಡೆದು ಮನೆ ಪಕ್ಕದ ಮಾವಿನ ಮರದ ಬಳಿ ತೆರಳಿದರು. ಮರಕ್ಕೆ ಹಗ್ಗ ಕಟ್ಟಿ ಅದರ ಕುಣಿಕೆಯನ್ನು ಕುತ್ತಿಗೆಗೆ ಹಾಕಿಕೊಂಡು ಜೋತಾಡಿದರು.
ಅವರ ಪತ್ನಿ ಸ್ವಾತಿ ನಾಯ್ಕ ಅವರು ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು. ಮರಣೋತ್ತರ ಪರೀಕ್ಷೆ ನಡೆಸಿ ಸಾವಿಗೆ ನೈಜ ಕಾರಣ ಪತ್ತೆ ಮಾಡುವಂತೆಯೂ ಅವರು ಪೊಲೀಸರಲ್ಲಿ ಕೋರಿದ್ದಾರೆ.