ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯತ ಹಾಗೂ ಅಂಕೋಲಾ ಪುರಸಭೆಯ ಕೇಣಿ ಗ್ರಾಮದಲ್ಲಿ ಫೆ 24ರಂದು ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
Geotechnical Investigation Work ಕಾಮಗಾರಿ ಸಂಬoಧ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಈ ನಿಷೇಧಾಜ್ಞೆ ಹೊರಡಿಸಲಾಗಿದೆ. ಈ ದಿನ ಬೆಳಗ್ಗೆ 6 ಗಂಟೆಯಿoದ ನಿಷೇಧಾಜ್ಞೆ ಜಾರಿಗೆ ಬರಲಿದೆ. ಫೆ 25ರ ಸಂಜೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ನಿಷೇಧಾಜ್ಞೆಯ ಅವಧಿಯಲ್ಲಿ 5 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜನ ಸೇರುವಂತಿಲ್ಲ. ಧರಣಿ ನಡೆಸುವುದು, ಪ್ರತಿಭಟನೆಗೆ ಮುಂದಾಗುವುದು ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುವಂತೆ ಘೋಷಣೆ ಕೂಗುವುದನ್ನು ಸಹ ನಿಷೇಧಿಸಲಾಗಿದೆ. ಯಾವುದೇ ಬಗೆಯ ಆಯುಧ, ದೊಣ್ಣೆ, ಕತ್ತಿ-ಈಟಿ ಹಾಗೂ ಬಂದೂಕು-ಕುಡಗೋಲುಗಳನ್ನು ಹಿಡಿದು ಓಡಾಡುವ ಹಾಗಿಲ್ಲ.
ಚಾಕು, ಕೋಲು, ಲಾಠಿ ಅಥವಾ ದೈಹಿಕ ಹಿಂಸೆ ಮಾಡಬಹುದಾದ ವಸ್ತುಗಳನ್ನು ಹಿಡಿಯುವುದು ಸಹ ನಿಷೇಧಿಸಲಾಗಿದೆ. ಯಾವುದೇ ಬಗೆಯ ಸ್ಪೋಟಕ, ಕಲ್ಲುಗಳನ್ನು ಹಿಡಿದವರ ವಿರುದ್ಧ ಸಹ ಸರ್ಕಾರ ಕ್ರಮ ಜರುಗಿಸಲಿದೆ. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಮನವಿ ಮಾಡಿದ್ದಾರೆ.