ಉಳುವಿ ಜಾತ್ರೆಗೆ ಬಂದಿದ್ದ ಭಕ್ತರ ಮೇಲೆ ಇನ್ನೊಂದು ಭಕ್ತರ ಗುಂಪು ದಾಳಿ ಮಾಡಿದೆ. ಈ ವೇಳೆ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಎಂಟು ಜನ ಉಳುವಿ ಜಾತ್ರೆಗೆ ಬಂದಿದ್ದರು. ಅವರು ಕುಳಗಿ ರಸ್ತೆ ಮೂಲಕ ಹಿಂತಿರುಗುತ್ತಿದ್ದರು. ಈ ವೇಳೆ ಬೆಳಗಾವಿ ಕಿತ್ತೂರು ಕಾದ್ರೋಳ್ಳಿ ಭಕ್ತರು ಅವರ ಮೇಲೆ ಮುಗಿ ಬಿದ್ದಿದ್ದಾರೆ. ಈ ವೇಳೆ ಬೈಲಹೊಂಗಲ ತಂಡದವರು ಸಹ ಪ್ರತಿ ದಾಳಿ ಮಾಡಿದ್ದಾರೆ.
ಈ ಜಟಾಪಟಿಯಲ್ಲಿ ಅದೃಶ್ಯಪ್ಪ ಹೊಳೆ, ನಾಗರಾಜಪ್ಪ ಕಳಸಣ್ಣನವರ್ ಎಂಬಾತರಿಗೆ ಗಾಯವಾಗಿದೆ. ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದಂತೆ ಹೊಡೆದಾಡಿಕೊಂಡವರು ಅಲ್ಲಿಂದ ನಾಪತ್ತೆಯಾಗಿದ್ದಾರೆ.
ಯಾವ ಕಾರಣಕ್ಕೆ ಈ ಜಗಳ ಶುರುವಾಯಿತು? ಯಾತಕ್ಕಾಗಿ ಹೊಡೆದಾಡಿಕೊಂಡರು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.