ಆರ್ಥಿಕ ಸಮಸ್ಯೆಯಿಂದ ತೊಂದರೆಗೆ ಒಳಗಾಗಿದ್ದ ಮಾರುತಿ ಮರಾಠಿ ವಿಷ ಸೇವಿಸಿ ಸಾವನಪ್ಪಿದ್ದಾರೆ.
ಅಂಕೋಲಾ ತಾಲೂಕಿನ ಅಚವೆಯ ವಡಗಾರದಲ್ಲಿ ಮಾರುತಿ ಕೃಷ್ಣ ಮರಾಠಿ (31) ವಾಸವಾಗಿದ್ದರು. ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಹಣಕಾಸು ಸಮಸ್ಯೆಯಿಂದ ಬಳಲಿದ್ದ ಮಾರುತಿ ಮರಾಠಿ ಮಾನಸಿಕವಾಗಿ ಕುಗ್ಗಿದ್ದರು.
ಫೆ 20ರಂದು ಕೃಷ್ಣ ಮರಾಠಿ ಮನೆಗೆ ವಿಷದ ಬಾಟಲಿ ತಂದಿದ್ದರು. ಸಂಜೆ ಅದನ್ನು ಸೇವಿಸಿ ಅಸ್ವಸ್ಥಗೊಂಡಿದ್ದರು. ಇದನ್ನು ನೋಡಿದ ಕುಟುಂಬದವರು ಅಂಕೋಲಾ ಆಸ್ಪತ್ರೆಗೆ ದಾಖಲು ಮಾಡಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರಕ್ಕೆ ಕರೆದೊಯ್ದರು.
ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಮಾರುತಿ ಮರಾಠಿ ಅವರನ್ನು ಗಮನಿಸಿದ ವೈದ್ಯರು ಈಗಾಗಲೇ ಅವರು ಸಾವನಪ್ಪಿದ ಬಗ್ಗೆ ಘೋಷಿಸಿದರು. ಸದ್ಯ ಅವರ ಶವ ಕಾರವಾರ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿದ್ದು, ಮಾರುತಿ ಅವರ ತಾಯಿ ಲೀಲಾವತಿ ಮರಾಠಿ ಅಂಕೋಲಾ ಠಾಣೆಯಲ್ಲಿ ಪೊಲೀಸ್ ಪ್ರಕರಣ ದಾಖಲಿಸಿ, ಶವ ಪಡೆದರು.