ಅಂಕೋಲಾ: ತಲೆನೋವಿನಿಂದ ಬಳಲುತ್ತಿದ್ದ ಸುಧಾ ನಾಯ್ಕ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವಾಗ ಸಾವನಪ್ಪಿದ್ದಾರೆ.
ಅಗಸೂರು ನವೆಗದ್ದೆಯ ಸುಧಾ ಮೋಹನ ನಾಯ್ಕ (51) ಅಂಕೋಲಾದ ಕುಂಬಾರಕೇರಿಯಲ್ಲಿ ವಾಸವಾಗಿದ್ದರು. ಸೋಮವಾರ ಸಂಬoಧಿ ಲತಾ ಹೊನ್ನೇಕೇರಿ ಅವರ ಮನೆಗೆ ತೆರಳಿದ್ದರು. ಅಲ್ಲಿ ತಲೆ ನೋವು ಎಂದು ಹೇಳಿಕೊಂಡಿದ್ದರು.
ಸoಜೆ ಮನೆಗೆ ಹೋಗುವಾಗ ಅಸ್ವಸ್ಥಗೊಂಡ ಅವರು ಕುಸಿದು ಬಿದ್ದರು. ರಿಕ್ಷಾ ಮೂಲಕ ಅವರನ್ನು ಅಂಕೋಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರ ಸೂಚನೆ ಪ್ರಕಾರ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಅಲ್ಲಿಂದ ಮುಂದೆ ಮಂಗಳೂರಿಗೆ ಕರೆದೊಯ್ಯುವ ಪ್ರಯತ್ನ ನಡೆಯಿತು.
ಆದರೆ, ಮಂಗಳವಾರ ಬೆಳಗ್ಗೆ ಬ್ರೇನ್ಸ್ಟೋಕ್’ನಿಂದಾಗಿ ಮಣಿಪಾಲ್ ಆಸ್ಪತ್ರೆ ಬಳಿ ಅವರು ಸಾವನಪ್ಪಿದರು.