ಕಾರವಾರ: `ಪ್ರಧಾನಮಂತ್ರಿ ಮತ್ಸ್ಯ ಸಂಪದ’ ಯೋಜನೆ ಅಡಿ ಸಹಾಯಧನ ಪಡೆಯಲು ಮೀನುಗಾರಿಕಾ ಇಲಾಖೆ ಅರ್ಜಿ ಕರೆದಿದ್ದು, ಮೀನು ಕೃಷಿ ಹಾಗೂ ಇದಕ್ಕೆ ಸಂಬoಧಿಸಿದ ಚಟುವಟಿಕೆ ನಡೆಸುವವರು ಅರ್ಜಿ ಸಲ್ಲಿಸಬಹುದು.
ಹೊಸ ಮೀನು ಕೃಷಿ ಕೊಳ ನಿರ್ಮಾಣ, ಸಣ್ಣ ಆರ್.ಎ.ಎಸ್ ಘಟಕ, 20 ಟನ್ ಸಾಮರ್ಥ್ಯದ ಮಂಜುಗಡ್ಡೆ ಸ್ಥಾವರ ನಿರ್ಮಾಣಕ್ಕೆ ಸಹಾಯಧನ ದೊರೆಯಲಿದೆ. ಸಾಂಪ್ರದಾಯಿಕ ಮೀನುಗಾರರಿಗೆ ದೋಣಿಗಳು ಮತ್ತು ಬಲೆಗಳನ್ನು ಒದಗಿಸುವುದು (ಎಫ್ಆರ್ಪಿ ಬೋಟ್) ಯೋಜನೆಯಲ್ಲಿ ಸಹಾಯಧನ ಪಡೆಯಲು ಸಾಮಾನ್ಯ ವರ್ಗದ ಫಲಾನುಭನಿಗಳಿಗೆ ಶೇ 40 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ 60 ರಷ್ಟು ಸಹಾಯಧನ ಸಿಗಲಿದೆ.
ಜುಲೈ 24ರ ಒಳಗೆ ಆಸಕ್ತರು ಅರ್ಜಿ ಸಲ್ಲಿಸಿ. ಮಾಹಿತಿಗೆ ತಾಲೂಕಿನ ಮೀನುಗಾರಿಕಾ ಇಲಾಖೆಗೆ ಭೇಟಿ ಕೊಡಿ.
Discussion about this post