ಜಾನಪದ ಹಾಡುಗಳಿಂದ ಪ್ರಸಿದ್ಧಿ ಪಡೆದು ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಸುಕ್ರಿ ಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಈ ವಿಷಯ ಅರಿತ ಶಾಸಕ ಸತೀಶ್ ಸೈಲ್ ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಸುಕ್ರಿ ಗೌಡ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಬಡಗೇರಿಯಲ್ಲಿರುವ ಅವರ ಮನೆಯಲ್ಲಿಯೇ ಅವರ ಆರೈಕೆ ನಡೆಯುತ್ತಿದ್ದು, ಮಂಗಳವಾರ ಆರೋಗ್ಯದಲ್ಲಿ ದಿಡೀರ್ ಬದಲಾವಣೆಯಾಯಿತು. ಈ ವಿಷಯ ಅರಿತ ಶಾಸಕ ಸತೀಶ್ ಸೈಲ್ ತಕ್ಷಣ ಅವರ ಆರೋಗ್ಯ ವಿಚಾರಿಸಿದರು. ತಕ್ಷಣ ಅವರು ವಿಶೇಷ ಆಂಬುಲೆನ್ಸ ಕಳುಹಿಸಿ ಅವರನ್ನು ಹೊರ ಜಿಲ್ಲೆಯ ಆಸ್ಪತ್ರೆಗೆ ಕಳುಹಿಸಿಕೊಟ್ಟರು.
ಇದಾದ ನಂತರವೂ ವೈದ್ಯರ ಜೊತೆ ಸತೀಶ್ ಸೈಲ್ ನಿರಂತರ ಸಂಪರ್ಕದಲ್ಲಿದ್ದು, ಸುಕ್ರಿ ಗೌಡ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ. `ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಬೇಕು. ಅವರ ಬಗ್ಗೆ ವಿಶೇಷ ಕಾಳಜಿವಹಿಸಿ’ ಎಂದು ಅವರು ವೈದ್ಯರಿಗೆ ಹೇಳಿದ್ದಾರೆ. ಇದೀಗ ಸುಕ್ರಿ ಗೌಡ ಆರೋಗ್ಯದಲ್ಲಿ ಚೇತರಿಕೆ ಕಂಡುಬoದಿದೆ.