ಶಿರಸಿ: ಹುಲಿ ಉಗುರಿನ ಪ್ರಕರಣದಿಂದ ಜಾಗೃತರಾದ ಉತ್ತರ ಕನ್ನಡ ಜಿಲ್ಲೆಯ 16 ಜನ ತಮ್ಮ ಬಳಿ ಇರುವ ವನ್ಯಜೀವಿ ಉತ್ಪನ್ನಗಳನ್ನು ಅರಣ್ಯ ಇಲಾಖೆಗೆ ಮರಳಿಸಿದ್ದಾರೆ.
ವನ್ಯಜೀವಿಗಳ ಉತ್ಪನ್ನಗಳನ್ನು ಸಾರ್ವಜನಿಕರು ಇಟ್ಟುಕೊಂಡಿದ್ದರೆ ಅದನ್ನು ಮರಳಿಸಲು ಅರಣ್ಯ ಇಲಾಖೆಯು 3 ತಿಂಗಳು ಕಾಲಾವಕಾಶ ನೀಡಿತ್ತು. ಜಿಲ್ಲೆಯ ವಿವಿಧ ಅರಣ್ಯ ಇಲಾಖೆ ಕಚೇರಿಗಳಿಗೆ ಜಿಂಕೆ, ಕಾಡೆಮ್ಮೆಗಳ ಕೊಂಬುಗಳು ಸೇರಿ ಒಟ್ಟು 78 ವಸ್ತುಗಳನ್ನು ಸಂಬoಧಪಟ್ಟ ಅರಣ್ಯ ಇಲಾಖೆಗೆ ನೀಡಿದ್ದು, ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಬಿಗ್ಬಾಸ್ ಎಂಬ ಟಿವಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ವರ್ತೂರು ಸಂತೋಷ ಎಂಬುವವರು ತಮ್ಮ ಕುತ್ತಿಗೆಗೆ ಹುಲಿ ಉಗುರು ಹಾಕಿದ್ದರು. 2023ರ ಅಕ್ಟೋಬರ್ನಲ್ಲಿ ರಾಮನಗರ ಜಿಲ್ಲೆಯ ರಾಮೋನಹಳ್ಳಿ ಅರಣ್ಯಾಧಿಳು ಬಿಗ್ಬಾಸ್ ಸೆಟ್ಗೆ ನುಗ್ಗಿ ವರ್ತೂರು ಸಂತೋಷ ಅವರನ್ನು ವಶಕ್ಕೆ ಪಡೆದಿದ್ದರು.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ವನ್ಯಜೀವಿ ಉತ್ಪನ್ನಗಳನ್ನು ಸಾರ್ವಜನಿಕರು ಇಟ್ಟುಕೊಳ್ಳುವುದು ಅಪರಾಧ ಎಂಬುದು ಅರಣ್ಯಾಧಿಕಾರಿಳ ವಾದವಾಗಿತ್ತು. ಇದಾಗುತ್ತಿದ್ದಂತೆ ಇತರ ಹಲವು ಸೆಲಿಬ್ರಿಟಿಗಳ ಕುತ್ತಿಗೆಯಲ್ಲೂ ಹುಲಿ ಉಗುರು ಇದೆ. ಅವರನ್ನೇಕೆ ಬಿಟ್ಟರು? ಎಂಬ ಪ್ರಶ್ನೆ ಜಾಲತಾಣಗಳಲ್ಲಿ ಎದ್ದಿತ್ತು. ಅದೇ ವಾರ ನಟರಾದ ದರ್ಶನ್, ನಿಖಿಲ್ ಕುಮಾರಸ್ವಾಮಿ, ಜಗ್ಗೇಶ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರ ಮನೆಗಳಿಗೂ ಅರಣ್ಯಾಧಿಕಾರಿಗಳು ನುಗ್ಗಿದ್ದರು. ಇಡೀ ರಾಜ್ಯದಲ್ಲಿ ಈ ದಾಳಿಗಳು ನಡೆದಿದ್ದವು.
Discussion about this post