ಜೊಯಿಡಾ ತಾಲೂಕಿನ ಗಣೇಶ ಗುಡಿಯ ಬಾಡಗುಂದದ ರೆಸಾರ್ಟಿನ ಈಜುಕೊಳದಲ್ಲಿ 6 ವರ್ಷದ ಬಾಲಕ ಸಾವನಪ್ಪಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗಾವಿಯ ಕುಟುಂಬವೊoದು ಜೊಯಿಡಾ ಪ್ರವಾಸಕ್ಕೆ ಬಂದಿತ್ತು. ಅಶೋಕ ಹೋಂ ಸ್ಟೇ ಎಂಬಲ್ಲಿ ಆ ಕುಟುಂಬವಾಸವಾಗಿತ್ತು. ಹುಸೇನೈನ್ ರಹೀಮ್ ಖಾನ್ ಎಂಬ ಬಾಲಕ ಅಲ್ಲಿನ ಈಜುಕೊಳಕ್ಕೆ ತೆರಳಿದ್ದು, ನೀರಿನಲ್ಲಿ ಮುಳಗಿ ಸಾವನಪ್ಪಿದ ಬಗ್ಗೆ ವರದಿಯಾಗಿದೆ. ನೀರಲ್ಲಿ ಮುಳುಗಿದ ಬಾಲಕನನ್ನು ತಕ್ಷಣ ದಾಂಡೇಲಿ ಆಸ್ಪತ್ರೆಗೆ ತರಲಾಯಿತು. ಆದರೆ, ಪ್ರಯೋಜನವಾಗಲಿಲ್ಲ.
ಸ್ಕೂಟರ್ ಏರಿದ ವ್ಯಕ್ತಿಗೆ ಹೃದಯ ಆಘಾತ!
ಭಟ್ಕಳದ ಹಾಶಿಮ್ ಬೇಕರಿ ಎದುರು ನಿಂತಿದ್ದ ಬೈಕ್ ತೆಗೆಯುವಾಗ ವ್ಯಕ್ತಿಯೊಬ್ಬರು ಹೃದಯಘಾತಕ್ಕೆ ಒಳಗಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಅವರು ಸಾವನಪ್ಪಿದ್ದಾರೆ.
54 ವರ್ಷದ ಫಜ್ಲೂರ್ ರೆಹಮಾನ್ ಶೇಖರ ಅವರು ಹೊಟೇಲಿಗೆ ತೆರಳಿದ್ದರು. ಅದಕ್ಕೂ ಮುನ್ನ ತಮ್ಮ ಸ್ಕೂಟರನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು. ಹೊಟೇಲಿನಿಂದ ಹೊರಬಂದ ನಂತರ ಅವರು ಸ್ಕೂಟರ್ ಏರಿ ಹೊರಡುವ ಮುನ್ನ ಹೃದಯಘಾತಕ್ಕೆ ಒಳಗಾದರು. ಅಲ್ಲಿಯೇ ಅವರು ಕುಸಿದು ಬಿದ್ದರು. ಅಲ್ಲಿದ್ದ ಸಾರ್ವಜನಿಕರು ಅವರನ್ನು ತಕ್ಷಣ ವೆಲ್ ಫೇರ್ ಆಸ್ಪತ್ರೆಗೆ ಸಾಗಿಸಿದರು. ಆದರೆ, ಪ್ರಯೋಜನವಾಗಲಿಲ್ಲ.
ವಿದ್ಯಾರ್ಥಿಯ ಜೀವ ರಕ್ಷಿಸಿದ ಆಪತ್ಬಾಂದವ!
ಗೋಕರ್ಣ ಕಡಲತೀರದಲ್ಲಿ ಮೋಜು-ಮಸ್ತಿಯಲ್ಲಿ ತೊಡಗಿದ್ದ ವಿದ್ಯಾರ್ಥಿಯೊಬ್ಬ ಅಪಾಯಕ್ಕೆ ಸಿಲುಕಿದ್ದು, ಜೀವರಕ್ಷಕ ಸಿಬ್ಬಂದಿ ಲೋಕೇಶ್ ಹರಿಕಾಂತ ಅವರ ಜೀವ ಉಳಿಸಿದ್ದಾರೆ. ಗಣೇಶ ಅಂಬಿಗ, ಶಿವಪ್ರಸಾದ್ ಅಂಬಿಗ ಸಹ ಸಾಹಸದಿಂದ ವಿದ್ಯಾರ್ಥಿಯನ್ನು ದಡಕ್ಕೆ ಎಳೆದು ತಂದಿದ್ದಾರೆ.
ಬೆoಗಳೂರಿನಿoದ 50 ವಿದ್ಯಾರ್ಥಿಗಳು ಭಾನುವಾರ ಗೋಕರ್ಣಕ್ಕೆ ಬಂದಿದ್ದರು. ಅದರಲ್ಲಿ ಜನಾರ್ಧನ (24) ಎಂಬಾತರು ಸಮುದ್ರಕ್ಕೆ ಹಾರಿದ್ದು, ಅಪಾಯಕ್ಕೆ ಸಿಲುಕಿದರು. ಮುಂದೆ ಹೋಗದಂತೆ ಸೂಚಿಸಿದರೂ ಅವರು ಕೇಳಲಿಲ್ಲ. ಸಾಕಷ್ಟು ಸಮಯದ ನಂತರ ಜನಾರ್ಧನ್ ಅವರು ನೀರಿನ ಸೆಳತಕ್ಕೆ ಸಿಲುಕಿರುವುದನ್ನು ನೋಡಿದ ಜೀವ ರಕ್ಷಕ ಸಿಬ್ಬಂದಿ ಸಮುದ್ರಕ್ಕೆ ಹಾರಿ ಅವರ ಜೀವ ಕಾಪಾಡಿದರು. ಸ್ಥಳೀಯರಾದ ಅಶ್ವನಿ ಕುಮಾರ್ ಅವರು ಜೀವ ರಕ್ಷಕ ಸಿಬ್ಬಂದಿಗೆ ನೆರವಾದರು.