ದಾಂಡೇಲಿ: ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಈಜುಕೊಳದ ನೀರು ಕುಡಿದು ಸಾವನಪ್ಪಿದ್ದು, ಆತನ ಸಾವಿನಲ್ಲಿ ಸಂಶಯ ವ್ಯಕ್ತವಾಗಿದೆ.
ಜೊಯಿಡಾ ಪಟೋಲಿ ಗ್ರಾಮದ ಜಂಗಲ್ನೆಸ್ಟ ಹೋಂ ಸ್ಟೇ’ನಲ್ಲಿ ಈ ಅವಘಡ ನಡೆದಿದೆ. ಕೊಲ್ಲಾಪುರದ ಹೃಷಿಕೇಶ ಪಾಟೀಲ (20) ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದು, ಎಲ್ಲರೂ ಹೋಂ ಸ್ಟೇದಲ್ಲಿ ಉಳಿದಿದ್ದರು. ಡಿ 21ರ ರಾತ್ರಿ ಹೋಂ ಸ್ಟೇಯಲ್ಲಿರುವ ಈಜುಕೊಳದಲ್ಲಿ ಎಲ್ಲರೂ ಈಜುತ್ತಿದ್ದರು.
ಈ ವೇಳೆ ಹೃಷಿಕೇಶ ಪಾಟೀಲ ಸಾವನಪ್ಪಿದ್ದಾರೆ. ಹೃಷಿಕೇಶ ಪಾಟೀಲ ಕಾಲು ಜಾರಿ ಬಿದ್ದು ಅಥವಾ ಮುಳುಗಿ ಸಾವನಪ್ಪಿರುವ ಬಗ್ಗೆ ಶಂಕೆಯಿದೆ. ಆದರೆ, ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ.
ಈ ಸಾವಿನಲ್ಲಿ ಅನುಮಾನವಿದೆ ಎಂದು ಹೃಷಿಕೇಶ ಪಾಟೀಲ ಅವರ ತಂದೆ ಬಾಳಸೋ ಪಾಟೀಲ್ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.