ಕಾರವಾರ: `ಪ್ರತಿಯೊಬ್ಬ ರಾಜ್ಯ ಸರಕಾರಿ, ಹೊರಗುತ್ತಿಗೆ ನೌಕರರು ತಾವು ಖಾತೆ ಹೊಂದಿರುವ ಬ್ಯಾಂಕ್ಗಳಲ್ಲಿ ಕಡ್ಡಾಯವಾಗಿ ಪ್ರತಿ ವರ್ಷ ಕೇವಲ 20 ರೂ ಪ್ರೀಮಿಯಂ ತುಂಬಿ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ವಿಮೆ ಮಾಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ ಈಶ್ವರ ಕಾಂದೂ ಕಿವಿಮಾತು ಹೇಳಿದ್ದಾರೆ.
ಇದರೊಂದಿಗೆ `ವಾರ್ಷಿಕ 436 ರೂ ಪ್ರೀಮಿಯಂ ತುಂಬುವ ಮೂಲಕ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ವಿಮಾ’ವನ್ನು ಪಡೆಯುವಂತೆ ಅವರು ಹೇಳಿದ್ದಾರೆ. `ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ವಿಮಾ ಮಾಡಿಸಿಕೊಂಡವರು ಸಾವನಪ್ಪಿದರೆ 2.50 ಲಕ್ಷ ರೂ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ವಿಮಾ ಮಾಡಿಸಿದರೆ 4 ಲಕ್ಷ ರೂ ಪರಿಹಾರ ಸಿಗಲಿದೆ. ಹೀಗಾಗಿ ಎಲ್ಲಾ ಸಿಬ್ಬಂದಿ ಇದನ್ನು ಮಾಡಬೇಕು’ ಎಂದವರು ಹೇಳಿದರು.