ಉತ್ತರ ಕನ್ನಡ ಜಿಲ್ಲೆಯಲ್ಲಿ 1434 ಕಡೆ ಸಾರ್ವಜನಿಕ ಗಣೇಶನ ಮೂರ್ತಿ ಸ್ಥಾಪಿಸಿ ಪೂಜಿಸಲಾಗುತ್ತದೆ. ಅವರೆಲ್ಲರಿಗೂ ಜಿಲ್ಲಾಡಳಿತ ಹಲವು ಸೂಚನೆಗಳನ್ನು ನೀಡಿದ್ದು, ಕಡ್ಡಾಯವಾಗಿ ಪಾಲಿಸಲು ಆದೇಶಿಸಿದೆ. ನಿಮ್ಮೂರಿನಲ್ಲಿಯೂ ಗಣೇಶನನ್ನು ಕೂರಿಸುತ್ತಿದ್ದರೆ ಈ ನಿಯಮ ಪಾಲಿಸುವುದು ಕಡ್ಡಾಯ!
ಸಾರ್ವಜನಿಕ ಗಣೇಶ ಉತ್ಸವ ಸಮಿತಿಯವರು ಮೊದಲನೇಯದಾಗಿ ಸ್ಥಳೀಯ ಸಂಸ್ಥೆಯಿ0ದ ಅನುಮತಿ ಪಡೆಯಬೇಕು. ನಂತರ ಪೊಲೀಸ್ ಇಲಾಖೆಯ ನಿಬಂಧನೆಗಳಿಗೆ ಒಪ್ಪಬೇಕು. ಗಣೇಶ ಕೂರಿಸುವ ಮಳಿಗೆಯ ಸುರಕ್ಷತೆಗೆ ಅಗ್ನಿ ಶಾಮಕ ಇಲಾಖೆ ನಿರ್ದೇಶನ ಪಾಲಿಸಬೇಕು. ಪೂಜೆ ಹಾಗೂ ಅಲಂಕಾರಕ್ಕೆ ಯಾವುದೇ ಕಾರಣಕ್ಕೂ ಏಕಬಳಕೆಯ ಪ್ಲಾಸ್ಟಿಕ್ ಹಾಗೂ ಫ್ಲೆಕ್ಸ್ ಅಳವಡಿಸುವ ಹಾಗಿಲ್ಲ.
ಗಣೇಶ ಹಬ್ಬದ ಅವಧಿಯಲ್ಲಿ ಸಂಜೆ 6ಗಂಟೆಯಿAದ ಬೆಳಗ್ಗೆ 10 ಗಂಟೆಯವರೆಗೆ ಪಟಾಕಿ ಸಿಡಿಸುವ ಹಾಗಿಲ್ಲ. ಉಳಿದ ಅವಧಿಯಲ್ಲಿ ಸಿಡಿಸುವ ಪಟಾಕಿ ಸಹ ಹಸಿರು ಪಟಾಕಿಯಾಗಿರಬೇಕು. ಸಂಜೆ 6ರಿಂದ ಬೆಳಗ್ಗೆ 10ರವರೆಗೆ ಮೈಕ್ ಸೇರಿದಂತೆ ಯಾವುದೇ ಬಗೆಯ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.
ಗಣೇಶ ಮೂರ್ತಿಗಳು ಸಹ ಮಣ್ಣಿನಿಂದ ಮಾಡಿದ್ದಾಗಿರಬೇಕು. ರಾಸಾಯನಿಕ ಬಣ್ಣಗಳಿಂದ ಕೂಡಿರಬಾರದು. ಜೊತೆಗೆ ಸ್ಥಳೀಯ ಸಂಸ್ಥೆಯವರು ಸೂಚಿಸಿದ ಸ್ಥಳದಲ್ಲಿಯೇ ಅವುಗಳನ್ನು ವಿಸರ್ಜಿಸಬೇಕು. ಪರಿಸರ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಈ ಎಲ್ಲಾ ನಿಯಮ ಪಾಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.