ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಮುಂದುವರೆದಿದ್ದು, ನೆರೆ ರಾಜ್ಯ ಗೋವಾದಲ್ಲಿಯೂ ಇದೇ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪರಿಣಾಮ ಆನಮೋಡ ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಹ ಭೂ ಕುಸಿತ ಉಂಟಾಗಿದೆ.
ಕರ್ನಾಟಕ ಗಡಿಯಿಂದ 12 ಕಿಮೀ ದೂರದಲ್ಲಿ ಗುಡ್ಡ ಕುಸಿದಿದೆ. ಗೋವಾ ರಾಜ್ಯಕ್ಕೆ ಸೇರಿದ ದೂದಸಾಗರ್ ಸ್ವಾಮಿ ದೇವಾಲಯದ ಬಳಿ ಹೆದ್ದಾರಿ ಮೇಲೆ ಮಣ್ಣಿನ ರಾಶಿ ಬಿದ್ದಿದೆ. ಇದರಿಂದ ಹೆದ್ದಾರಿ ಪ್ರಯಾಣ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ವಾಹನಗಳು ಸಾಲುಗಟ್ಟಿ ನಿಂತಿವೆ.
ಹೀಗಾಗಿ ಈ ಮಾರ್ಗವಾಗಿ ಸಂಚರಿಸುವವರು ಕಾದು, ಪ್ರಯಾಣ ಬೆಳಸುವುದು ಸೂಕ್ತ.
Discussion about this post