ಗೋಕರ್ಣದ ಯತೀಶ ಉಪಾಧ್ಯ ಅವರ ಕಾರು ಅಪಘಾತವಾಗಿದೆ. ಕುಮಟಾದ ರವಿಕಿರಣ ನಾಯ್ಕ ಅವರು ಆ ಕಾರಿಗೆ ಬಸ್ಸು ಗುದ್ದಿದ್ದಾರೆ.
ಕುಮಟಾ ತಾಲೂಕಿನ ಗೋಕರ್ಣದ ಯತೀಶ ಉಪಾಧ್ಯ ಅವರು ಕೋಟಿತೀರ್ಥದ ಬಳಿ ಮನೆ ಮಾಡಿಕೊಂಡಿದ್ದಾರೆ. ವೈದಿಕ ವೃತ್ತಿ ಅವರ ಕಸುಬು. ಏಪ್ರಿಲ್ 5ರಂದು ಅವರು ತಳಗೇರಿ ಗ್ರಾಮಕ್ಕೆ ಹೋಗಿದ್ದರು. ಮೊಗೇರಕಟ್ಟೆ ಬಳಿ ತಿರುವಿನಲ್ಲಿ ಎದುರಿನಿಂದ ಬಂದ ಬಸ್ಸು ಅವರ ಕಾರಿಗೆ ಡಿಕ್ಕಿ ಹೊಡೆಯಿತು.
ಕುಮಟಾದ ರವಿಕಿರಣ ನಾಯ್ಕ ಈ ಬಸ್ಸು ಓಡಿಸುತ್ತಿದ್ದರು. ಮಾದನಗೇರಿ ಕಡೆಯಿಂದ ಗೋಕರ್ಣ ಕಡೆ ಬರುತ್ತಿದ್ದ ಅವರು ವೇಗವಾಗಿ ಬಸ್ಸು ಬಿಟ್ಟಿದ್ದರು. ಅತಿ ವೇಗದ ಪರಿಣಾಮ ಬಸ್ಸು ಕಾರಿನ ಬಲ ಬದಿಗೆ ಗುದ್ದಿತು. ಈ ಅಪಘಾತದಲ್ಲಿ ಯಾರಿಗೂ ಗಾಯವಾಗಿಲ್ಲ. ಯತೀಶ ಉಪಾಧ್ಯ ಅವರು ಆರೋಗ್ಯವಾಗಿದ್ದಾರೆ. ಆದರೆ, ಅವರ ಕಾರು ಜಖಂ ಆಗಿದ್ದು, ಗ್ಯಾರೇಜ್ ಸೇರಿದೆ.
ಕಾರು ಜಖಂ’ಗೊಳಿಸಿದ ಚಾಲಕನ ವಿರುದ್ಧ ಯತೀಶ ಉಪಾಧ್ಯ ಅವರು ಗೋಕರ್ಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. `ನಿಧಾನವಾಗಿ ಬಸ್ಸು ಓಡಿಸಿ’ ಎಂದು ಬಸ್ಸಿನಲ್ಲಿದ್ದ ಪ್ರಯಾಣಿಕರು ಸಹ ರವಿಕಿರಣ ನಾಯ್ಕರಿಗೆ ಬುದ್ದಿ ಹೇಳಿದ್ದು, ಅವರು ಅದಕ್ಕೆ ತಲೆಯಾಡಿಸಿದ್ದಾರೆ.