ಗೋಕರ್ಣ ( Gokarna ) ಮಹಾಬಲೇಶ್ವರ ದೇವಾಲಯ ಆಡಳಿತಕ್ಕೆ ಸಂಬ0ಧಿಸಿ ಸುಪ್ರೀಂ ಕೋರ್ಟಿನಲ್ಲಿನ ಆದೇಶದಂತೆ ಅಲ್ಲಿನ ಅಧ್ಯಕ್ಷರಿಗೆ ಪೂರ್ಣ ಪ್ರಮಾಣದ ಅಧಿಕಾರ ದೊರೆತಿದೆ. ಈ ಹಿನ್ನಲೆ ಅವರು ತಮ್ಮ ಹಕ್ಕು ಚಲಾಯಿಸಿ ನೂತನ ಆಡಳಿತ ಸಮಿತಿಗೆ ಸದಸ್ಯರ ಆಯ್ಕೆ ಮಾಡಿದ್ದಾರೆ.
ಉಪಾಧಿವಂತರಾದ ಗಣಪತಿ ಶಿವರಾಮ ಭಟ್ ಹಿರೇಭಟ್ಟ, ಸುಬ್ರಹ್ಮಣ್ಯ ಚಂದ್ರಶೇಖರ ಅಡಿ ಹಾಗೂ ಪರಿಣಿತ ವಿದ್ವಾಂಸ ಪರಮೇಶ್ವರ ಸುಬ್ರಹ್ಮಣ್ಯ ಪ್ರಸಾದ ರಮಣಿ ಮತ್ತು ಮಹೇಶ ಗಣೇಶ ಹಿರೇಗಂಗೆ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಮಿತಿಗೆ ಈ ನಾಲ್ವರು ಸದಸ್ಯರನ್ನು ನೇಮಿಸಿದ್ದನ್ನು ಪ್ರಶ್ನಿಸಿ ರಾಮಚಂದ್ರಾಪುರ ಮಠ ಹೈಕೋಟ್ನಲ್ಲಿ ದಾವೆ ಹೂಡಿದ್ದು, ಇದಕ್ಕೆ ತಡೆಯಾಜ್ಞೆ ತಂದಿತ್ತು.
ಇದರಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ನಾಲ್ವರು ಸಮಿತಿ ಸದಸ್ಯರಾಗಿ ಮುಂದುವರೆದಿದ್ದರು. ತಡೆಯಾಜ್ಞೆ ವಿರುದ್ಧ ಸರ್ಕಾರವು ಸುಪ್ರೀಂ ಕೋರ್ಟ ಮೊರೆ ಹೋಗಿದ್ದು, ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜು.29ರಂದು ಸಮಿತಿ ಅಧ್ಯಕ್ಷ ಬಿ.ಎನ್.ಶ್ರೀಕೃಷ್ಣ ಅವರ ನೇತೃತ್ವದ ಹೊಸ ಸಮಿತಿಗೆ ಅಧಿಕಾರದಲ್ಲಿ ಮುಂದುವರೆಯಲು ನಿರ್ದೇಶನ ನೀಡಿತ್ತು. ಇದರ ಜೊತೆ ಹೊಸ ಸದಸ್ಯರನ್ನು ಸೇರಿಸಿಕೊಳ್ಳುವ ಜೊತೆಗೆ ಆಡಾಳಿತದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಹಕ್ಕನ್ನು ಅವರಿಗೆ ನೀಡಿತ್ತು.
Discussion about this post