ದಾಂಡೇಲಿ: ವಿದ್ಯುತ್ ಕಂಬಕ್ಕೆ ಅಳವಡಿಸುವ ಕಬ್ಬಿಣದ ಸಲಕರಣೆಗಳನ್ನು ಅಪಹರಿಸುತ್ತಿದ್ದ ಕಳ್ಳನನ್ನು ಹೆಸ್ಕಾಂ ಅಧಿಕಾರಿಗಳು ವಿಶೇಷ ತಂಡ ರಚಿಸಿ ಹಿಡಿದಿದ್ದಾರೆ.
ಹಳೆ ದಾಂಡೇಲಿ, ಕೊಗಿಲಬನ ಸೇರಿ ನಾನಾ ಪ್ರದೇಶದಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸುವ ಜಿಓಎಸ್ ಹಾಗೂ ಇನ್ನಿತರ ಕಬ್ಬಿಣದ ಸಲಕರಣೆಗಳನ್ನು ಬೈಲಪಾರುವಿನ ವಿಲ್ಸನ್ ಎಂಬಾತ ಕದಿಯುತ್ತಿದ್ದ. ಆತನನ್ನು ಹುಡುಕುವುದೇ ಹೆಸ್ಕಾಂ’ಗೆ ಸಾಹಸವಾಗಿತ್ತು. ಹೆಸ್ಕಾಂ ಅಧಿಕಾರಿ ದೀಪಕ ನಾಯಕ ಶಾಖಾಧಿಕಾರಿ ಉದಯ ಸೇರಿಕೊಂಡು ಕಳ್ಳನ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.
ಪಟೇಲ್ ವೃತ್ತದ ಗುಜುರಿ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿದ ತಂಡಕ್ಕೆ ಅಲ್ಲಿ ಹೆಸ್ಕಾಂ’ಗೆ ಸಂಬoಧಿಸಿದ ಕೆಲ ವಸ್ತುಗಳು ಸಿಕ್ಕಿದ್ದವು. ಗುಜುರಿ ಅಂಗಡಿಯವನನ್ನು ವಿಚಾರಿಸಿದಾಗ ಆತ ವಿಲ್ಸನ್ ಮನೆಯನ್ನು ತೋರಿಸಿದ್ದ. ಆ ಮನೆಯಲ್ಲಿ ಶೋಧ ನಡೆಸಿದಾಗ ಇನ್ನೂ ಅನೇಕ ಕದ್ದ ಸಾಮಗ್ರಿಗಳು ಸಿಕ್ಕಿದವು. ಅಲ್ಲಿಯೇ ವಿಲ್ಸನನನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದು ಜೀಪಿಗೆ ತುಂಬಿಕೊoಡರು. ಗುಜುರಿ ವ್ಯಾಪಾರಿಯ ವಿಚಾರಣೆ ಸಹ ಮುಂದುವರೆದಿದೆ.