ಯಲ್ಲಾಪುರ: ಗುರು ಪೂರ್ಣಿಮೆ (Gurupurnima) ಅಂಗವಾಗಿ ಸ್ವರ ಮಾಧುರಿ ಸಂಗೀತ ವಿದ್ಯಾಲಯದಿಂದ ತಟಗಾರದ (ಜೋಡಳ್ಳ) ಲಕ್ಷ್ಮೀ ನರಸಿಂಹ ದೇವಾಲಯದ ಆವರಣದಲ್ಲಿ ಅಗಸ್ಟ 15ರ ಗುರುವಾರ ಇಡೀ ದಿನ `ಗುರು ವಂದನಾ – ನಾದ ಪೂರ್ಣಿಮಾ’ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸಂಗೀತ ಗುರು ದಿ ಪಂ ಸಂದೀಪ ಉಡುಪರ ಸ್ಮರಣಾರ್ಥ ಸಂಗೀತ ಆರಾಧನೆ ನಡೆಯಲಿದೆ. ಸ್ವಾತಂತ್ರೋತ್ಸವದ ಅಂಗವಾಗಿ ದೇಶಭಕ್ತಿಗೀತೆಗಳ ಗಾಯನವೂ ಇರಲಿದೆ. ಸ್ವರ ಮಾಧುರಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಬೆಳಗ್ಗೆ 9ಗಂಟೆಯಿoದ ರಾತ್ರಿ 8 ಗಂಟೆಯವರೆಗೂ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಗಮಿಸುವವರಿಗೆ ಮಧ್ಯಾಹ್ನ ಪ್ರಸಾದ ಬೋಜನ ವ್ಯವಸ್ಥೆಯಿದೆ. ಬೆಳಗ್ಗಿನ ಅವಧಿಯಲ್ಲಿ ವಿದ್ಯಾರ್ಥಿಗಳು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಧ್ಯಾಹ್ನದ ನಂತರ ವಿವಿಧ ಕಲಾವಿದರು ಆಗಮಿಸಿ ಸಂಗೀತ ಕಾರ್ಯಕ್ರಮ ನಡೆಸಲಿದ್ದಾರೆ. ತಟಗಾರ ಊರಿನವರು ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದಾರೆ.
ಮುಖ್ಯವಾಗಿ ಗಣಪತಿ ಹೆಗಡೆ, ವಾಣಿ ರಮೇಶ ಹೆಗಡೆ, ಗಣೇಶ ನೇರಲೆಮನೆ, ಸುಧಾಮ ದಾನಗೇರಿ ಹಾಗೂ ಅಂಕೋಲಾದ ಮಹೇಶ ಮಹಾಲೆ ಗಾಯನ ಪ್ರಸ್ತುತಪಡಿಸುವರು. ತಬಲಾ ವಾದಕರಾಗಿ ಮಧು ಕುಡಾಳಕರ್, ಗಣೇಶ ಗುಂಡ್ಕಲ್, ರಾಜೇಂದ್ರ ಭಾಗ್ವತ್ ಆಗಮಿಸಲಿದ್ದಾರೆ. ಸತೀಶ ಭಟ್ಟ ಹಾಗೂ ಸುದೇಶ ಭಟ್ಟ ಹಾರ್ಮೋನಿಯಂ ವಾದಕರಾಗಿ ಭಾಗವಹಿಸಲಿದ್ದಾರೆ. ಸಮಸ್ತ ಕಲಾಭಿಮಾನಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಸಂಗೀತ ಆಲಾಪದಲ್ಲಿ ಭಾಗವಹಿಸುವಂತೆ ಸಂಘಟಕ ರಮೇಶ ಹೆಗಡೆ ಹಾಗೂ ಸುಬ್ರಾಯ ಭಟ್ಟ ಜೋಡಳ್ಳ ಕೋರಿದ್ದಾರೆ.
Discussion about this post