ಅಣ್ಣ-ತಮ್ಮನ ನಡುವೆ ಮಾತಿಗೆ ಮಾತು ಬೆಳೆದು ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿರಸಿ ತಾಲೂಕಿನ ಹುತ್ಗಾರದಲ್ಲಿ ವಾಸವಾಗಿದ್ದ ಶಿವರಾಜ ಗಣಪತಿ ಮುಕ್ರಿ ತನ್ನ ಒಡಹುಟ್ಟಿದ ಅಣ್ಣ ತ್ಯಾಗರಾಜ ಗಣಪತಿ ಮುಕ್ರಿ ಅವರನ್ನು ಕೊಲೆ ಮಾಡಿದ್ದಾರೆ. ಭಾನುವಾರ ಸಂಜೆ ಶಿವರಾಜ ಮುಕ್ರಿ ಸುತ್ತಿಗೆಯಿಂದ ಹೊಡೆದ ಪರಿಣಾಮ ತ್ಯಾಗರಾಜ ಮುಕ್ರಿ ಸಾವನಪ್ಪಿದ್ದಾರೆ.
ಹೊಡೆದಾಟ ತಪ್ಪಿಸಲು ಬಂದ ಸಹೋದರಿ ಹೇಮಾವತಿ ತ್ಯಾಗರಾಜ ಮುಕ್ರಿ ಅವರ ಮೇಲೆಯೂ ಹಲ್ಲೆ ನಡೆದಿದೆ. ಜೊತೆಗೆ ಅಲ್ಲಿದ್ದ ರೋಹಿತ್ ಮುಕ್ರಿ ಎಂಬಾತರಿಗೂ ಶಿವರಾಜ ಮುಕ್ರಿ ಹೊಡೆದ ಬಗ್ಗೆ ದೂರಲಾಗಿದೆ.
ಶಿರಸಿ ಸಿಪಿಐ ಸೀತಾರಾಮ ಅವರು ಕಾರ್ಯಾಚರಣೆ ನಡೆಸಿ ಶಿವರಾಜ ಮುಕ್ರಿಯನ್ನು ಬಂಧಿಸಿದ್ದಾರೆ. ಹುಲೆಕಲ್ ಬಸ್ ನಿಲ್ದಾಣದ ಬಳಿ ಅಲೆದಾಡುತ್ತಿದ್ದ ಶಿವರಾಜ ಮುಕ್ರಿಯ ವಿಚಾರಣೆ ಮುಂದುವರೆದಿದೆ.