ಕಾರವಾರ: ಪೂಣಾದಲ್ಲಿ ಉದ್ದಿಮೆ ನಡೆಸುತ್ತಿದ್ದ ವಿನಾಯಕ ನಾಯ್ಕ ಮೇಲೆ ಐವರು ಅಪರಿಚಿತರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ರಕ್ತದ ಮೊಡವಿನಲ್ಲಿ ಹೊಯ್ದಾಟ ನಡೆಸಿದ ವಿನಾಯಕ ನಾಯ್ಕ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಭಾನುವಾರ ನಸುಕಿನ 5 ಗಂಟೆಗೆ ಹಣಕೋಣದಲ್ಲಿರುವ ವಿನಾಯಕ ನಾಯ್ಕ ಅವರ ಮನೆಗೆ ನುಗ್ಗಿದ ಐವರು ಕಬ್ಬಿಣದ ರಾಡಿನಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಚಾಕು ಹಾಗೂ ತಲ್ವಾರಿನಿಂದ ಇರಿದು ಕೊಲೆ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಅವರ ಪತ್ನಿ ವಿಶಾಲಿ ಮೇಲೆಯೂ ಅಪರಿಚತರು ದಾಳಿ ನಡೆಸಿದ್ದು, ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಣೇಶ ಹಬ್ಬದ ಹಿನ್ನಲೆ ವಿನಾಯಕ ನಾಯ್ಕ ಊರಿಗೆ ಬಂದಿದ್ದರು. ಸಾತೇರಿ ದೇವಿಯ ಜಾತ್ರೆ ಮುಗಿಸಿದ ಅವರು ಭಾನುವಾರ ಬೆಳಗ್ಗೆ ಪೂಣಾಗೆ ತೆರಳುವವರಿದ್ದರು. ಇದಕ್ಕಾಗಿ ಎಲ್ಲಾ ಬಗೆಯ ತಯಾರಿ ಮಾಡಿಕೊಂಡಿದ್ದು, ಆ ವೇಳೆಗೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ವಿನಾಯಕ ನಾಯ್ಕ ಅವರ ವ್ಯವಹಾರಕ್ಕೆ ಸಂಬAಧಿಸಿ ಈ ಕೊಲೆ ನಡೆದ ಶಂಕೆ ವ್ಯಕ್ತವಾಗಿದೆ. `ಸ್ನೇಹಪರ ವ್ಯಕ್ತಿತ್ವದ ವಿನಾಯಕ ನಾಯ್ಕ ಊರಿನಲ್ಲಿ ಎಲ್ಲರ ಜೊತೆ ಬೆರೆಯುತ್ತಿದ್ದರು. ಸಣ್ಣ ವಯಸ್ಸಿನಲ್ಲಿಯೇ ಅವರು ಈ ರೀತಿ ಸಾವನಪ್ಪಿದ್ದು ಶೋಚನೀಯ’ ಎಂದು ಊರಿನವರು ಮಾತನಾಡಿಕೊಂಡರು.