ಜೋಯಿಡಾ: ಬಂಗಾರದ ಮೇಲಿನ ಆಸೆಗೆ ವೃದ್ಧೆಗೆ ಹೊಡೆದು ಚಿನ್ನ ಕದ್ದು ಪರಾರಿಯಾಗಿದ್ದ ಮಹಿಳೆಯನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.
ಕ್ಯಾಸಲ್ರಾಕ್ ಕಣಂಗಿಣಿ ರಸ್ತೆಯ ಲಕ್ಷ್ಮೀವಾಡ ಸಮೀಪ ವೃದ್ಧೆಯೊಬ್ಬರು ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಬದುಕಿರಲಿಲ್ಲ.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಒಂದೊAದೇ ವಿಷಯ ಗೊತ್ತಾಗಿದ್ದು, ಸಿಸಿ ಕ್ಯಾಮರಾಗಳ ಆಧಾರದಲ್ಲಿ ರಾಮನಗರ ಕೆಪಿಸಿ ಕಾಲೋನಿಯ ಪ್ರತಿಮಾ ಪ್ರಕಾಶ ಮರಾಠರನ್ನು ವಿಚಾರಣೆಗೊಳಪಡಿಸಿದರು. ಆಗ ಪ್ರತಿಮಾ ವೃದ್ಧೆಯನ್ನು ಹೊಡೆದು ಚಿನ್ನಾಭರಣ ದೋಚಿರುವುದು ಬೆಳಕಿಗೆ ಬಂದಿತು.
ಇದನ್ನು ಓದಿ: ವೃದ್ಧೆ ಮೇಲೆ ಹಲ್ಲೆ ನಡೆದಿದ್ದು ಹೇಗೆ? ಆ ದಿನ ನಡೆದಿದ್ದೇನು?
ಸಾಲ ಮಾಡಿಕೊಂಡಿದ್ದ ಪ್ರತಿಮಾ ವೃದ್ಧೆಗೆ ನಾಟಿ ಔಷಧಿ ಕೊಡುವ ನೆಪದಲ್ಲಿ ಕಾಡಿಗೆ ಕರೆದೊಯ್ದು ಹಲ್ಲೆ ಮಾಡಿ, ಚಿನ್ನಾಭರಣ ಎಗರಿಸಿದ್ದು ತನಿಖೆಯಿಂದ ಗೊತ್ತಾಗಿದೆ. ಸುತ್ತಿಗೆಯಿಂದ ಹೊಡೆದ ಪರಿಣಾಮ ವೃದ್ಧೆ ಸಾವನಪ್ಪಿದ್ದು, ಪ್ರತಿಮಾರನ್ನು ಜೈಲಿಗೆ ಕಳುಹಿಸಲಾಗಿದೆ.