6

ಪೊಲೀಸ್ ಅಧೀಕ್ಷಕರಿಂದಲೂ ಸತ್ಯ ಶೋಧನೆ: ಅದು ಕಳ್ಳ ಪಕ್ಷಿ ಅಲ್ಲ.. ಒಳ್ಳೆಯ ಹಕ್ಕಿ!

ಕಾರವಾರ: `ಮಹಾರಾಷ್ಟ್ರದ ಅರಣ್ಯ ಇಲಾಖೆಯವರು ಅಧ್ಯಯನಕ್ಕಾಗಿ ರಣಹದ್ದಿನ ಮೇಲೆ ಜಿಪಿಎಸ್ ಹಾಗೂ ಸೋಲಾರ್ ಪ್ಲೇಟ್ ಅಳವಡಿಸಿದ್ದು, ಜನ ಆತಂಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಹೇಳಿದ್ದಾರೆ.

ನಗರದ ಹಲವು ಭಾಗದಲ್ಲಿ ಕಾಣಿಸಿಕೊಂಡಿರುವ ರಣಹದ್ದು ಕಾಣಿಸಿಕೊಂಡಿದ್ದು, ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹದ್ದಿನ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಅರಣ್ಯ ಇಲಾಖೆಯವರು ಸಹ ಆ ಹದ್ದಿನಿಂದ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ. ಅದಾಗಿಯೂ ಕೆಲ ಕಿಡಿಗೇಡಿಗಳು ಜನರನ್ನು ಹೆದರಿಸುತ್ತಿದ್ದು, ಪೊಲೀಸರು ಸಹ ಹಕ್ಕಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆಗ `ಆ ಹಕ್ಕಿ ಯಾವುದೇ ತಪ್ಪು ಮಾಡಿಲ್ಲ’ ಎಂದು ಸಾಭೀತಾಗಿದೆ. ಈ ಹಿನ್ನಲೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಸಹ `ಹಕ್ಕಿಗೆ ತೊಂದರೆ ಕೊಡಬೇಡಿ’ ಎಂದು ಜನರಿಗೆ ತಮ್ಮ ಸಂದೇಶ ರವಾನಿಸಿದ್ದಾರೆ. ಇದರೊಂದಿಗೆ ಆ ರಣಹದ್ದಿನ ವಿಶೇಷದ ಪೋಸ್ಟರ್ ಹಾಗೂ ಸತ್ಯ ಮಾಹಿತಿಯನ್ನು ಅವರು ಹಂಚಿಕೊoಡಿದ್ದಾರೆ.

ಪಕ್ಷಿಯ ಎರಡೂ ಕಾಲುಗಳಿಗೆ ಬಣ್ಣದ ಸ್ಟಿಕರ್ ಅಳವಡಿಸಲಾಗಿದ್ದು, ಆಂಗ್ಲ ಭಾಷೆಯ ಅಕ್ಷರಗಳನ್ನು ಬರೆಯಲಾಗಿದೆ. ಕೆಲ ಸಂಖ್ಯೆಗಳು ಸಹ ಗೋಚರಿಸುತ್ತಿವೆ. ಪಕ್ಷಿಯ ಬೆನ್ನ ಮೇಲೆ ಸೋಲಾರ್ ಪ್ಲೇಟ್ ರೀತಿ ಕಾಣುವ ಚಿಪ್ ಇದ್ದು ಇದೆಲ್ಲದರ ಬಗ್ಗೆ ಪೊಲೀಸ್ ಅಧೀಕ್ಷಕರು ಮಾಹಿತಿ ರವಾನಿಸಿದ್ದಾರೆ. `ಈ ಹಕ್ಕಿ ವಿಷಯದಲ್ಲಿ ಯಾವುದೇ ಗೊಂದಲ ಬೇಡ’ ಎಂಬುದು ಪೊಲೀಸ್ ಅಧೀಕ್ಷಕರ ಮಾತು.

ಇದನ್ನೂ ಓದಿ: ಕಾರವಾರಕ್ಕೆ ಬಂದ ಜಿಪಿಎಸ್ ಹಕ್ಕಿ!

`ಯಾವುದೇ ರಹಸ್ಯ ಕಾರ್ಯಾಚರಣೆಗಾಗಿ ಈ ಹಕ್ಕಿ ಬಂದಿಲ್ಲ. ಚಳಿಗಾಲದ ಅವಧಿಯಾಗಿದ್ದರಿಂದ ಈ ಭಾಗಕ್ಕೆ ಹದ್ದು ವಲಸೆ ಬಂದಿದ್ದು, ಅದಕ್ಕೆ ತೊಂದರೆ ಕೊಡುವುದು ಬೇಡ’ ಎಂದು ಎಂ ನಾರಾಯಣ ಅವರು ಹೇಳಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page