6

ಮನೆ ಮುರಿದ ಕಳ್ಳರಿಗೆ ಜೈಲು | ಎಗ್‌ರೈಸ್ ಅರ್ಜುನನಿಗೆ ಸಿಕ್ಕಿದ ನ್ಯಾಯ

ಮುಂಡಗೋಡು: ಎಗ್‌ರೈಸ್ ವ್ಯಾಪಾರಿ ಅರ್ಜುನ್ ಸಿಂಗ್ ಮನೆಯಲ್ಲಿ ಕಳ್ಳತನ ಮಾಡಿದವರನ್ನು ಪೊಲೀಸರು ಹಿಡಿದಿದ್ದಾರೆ.

ಅಕ್ಟೊಬರ್ 28ರಂದು ಭಾರತನಗರದ ಅರ್ಜುನ್ ಸಿಂಗ್ ಠಾಕೂರ್ ಅವರ ಮನೆಯಲ್ಲಿ 50 ಸಾವಿರ ರೂ ಹಣದ ಜೊತೆ ಚಿನ್ನಾಭರಣವನ್ನು ಕಳ್ಳರು ದೋಚಿದ್ದರು. ತನಿಖೆ ನಡೆಸಿದ ಪೊಲೀಸರು ಸುಭಾಸನಗರದ ಚೇತನ ನರೇಶ ಪಾರ್ಗೆ (23) ಹಾಗೂ ವಿನಾಯಕ ಕರಿಯಪ್ಪ ಬೋವಿವಡ್ಡರ್ (23) ಎಂಬಾತರನ್ನು ಬಂಧಿಸಿದ್ದಾರೆ.

ಭಾರತನಗರದ ಅರ್ಜುನ್ ಮನೆಯ ಕಿಟಕಿಯ ಜ್ಯಾಲರಿ ತೆಗೆದ ಕಳ್ಳರು ಅಲ್ಲಿಂದ ಮನೆ ಒಳಗೆ ನುಗ್ಗಿದ್ದರು. ಮನೆ ಒಳಗಡೆ ಇದ್ದ ಬಾಗಿಲು ಒಡೆದಿದ್ದರು. ನಂತರ ಕೋಣೆ ಪ್ರವೇಶಿಸಿ ಅಲ್ಲಿದ್ದ ಚಿನ್ನದ ಉಂಗುರ, ಬೆಳ್ಳಿ ಕೈಗಡ ಸೇರಿ ಹಣವನ್ನು ಎಗರಿಸಿದ್ದರು. ಇದೀಗ ಪೊಲೀಸರು ಕಳ್ಳರ ಬಳಿಯಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.

ಸಿಪಿಐ ರಂಗನಾಥ ನೀಲಮ್ಮನವರ್ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಹಿಡಿದರು. ಪಿಎಸ್‌ಐ ಹನುಮಂತ ಕುಡಗಂಟಿ, ಪೊಲೀಸ್ ಸಿಬ್ಬಂದಿ ಕೋಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ್, ಮಹಾಂತೇಶ ಈ ತಂಡದಲ್ಲಿದ್ದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page