6

ದನಕ್ಕೆ ಬೆದರಿ ಗದ್ದೆಗೆ ಹಾರಿದ ಲಾರಿ!

ಯಲ್ಲಾಪುರ: ಇಡಗುಂದಿ ರಾಮಲಿಂಗೇಶ್ವರ ದೇವಾಲಯದ ಬಳಿ ಲಾರಿಯೊಂದು ಗದ್ದೆಗೆ ಬಿದ್ದಿದೆ.

ಮಹಾರಾಷ್ಟ್ರದ ರುಶಿಕೇಶ್ ಪಿಸಾಲ್ ಎಂಬಾತರ ಲಾರಿಯಲ್ಲಿ ಔಷಧಿ ಸರಬರಾಜಾಗುತ್ತಿತ್ತು. ಹುಬ್ಬಳ್ಳಿ – ಅಂಕೋಲಾ ಮಾರ್ಗವಾಗಿ ಈ ಲಾರಿ ಸಂಚರಿಸುತ್ತಿತ್ತು. ನ 9ರಂದು ರಾತ್ರಿ ಸಂತೋಷ ಪೆರಾಲ್ ಎಂಬಾತ ಔಷಧಿ ತುಂಬಿದ ಲಾರಿಯನ್ನು ಓಡಿಸುತ್ತಿದ್ದ. 11 ಗಂಟೆಯ ವೇಳೆಗೆ ರಾಮಲಿಂಗೇಶ್ವರ ದೇವಾಲಯದ ಕಮಾನಿನ ಬಳಿ ಲಾರಿಗೆ ದನ ಅಡ್ಡ ಬಂದಿದ್ದು, ಇದರಿಂದ ಬೆದರಿದ ಚಾಲಕ ಲಾರಿಯ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದ.

ದನ ತಪ್ಪಿಸುವ ಬರದಲ್ಲಿ ಲಾರಿಯನ್ನು ಹೆದ್ದಾರಿ ಪಕ್ಕದ ಗದ್ದೆಗೆ ಇಳಿಸಿದ್ದು, ಲಾರಿ ಜಖಂ ಆಗಿದೆ. ಚಾಲಕನಿಗೆ ಎಲ್ಲಿಯೂ ಪೆಟ್ಟಾಗಿಲ್ಲ. ಲಾರಿ ಹಾನಿ ಮಾಡಿದ ಕಾರಣ ಚಾಲಕನ ವಿರುದ್ಧ ಮಾಲಕ ರುಶಿಕೇಶ್ ಪಿಸಾಲ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ವಿಮಾ ಪರಿಹಾರಕ್ಕಾಗಿ ಮೊರೆ ಹೋಗಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page