6

ಅಡಿಕೆ ಕದ್ದು ಮಾನ ಕಳೆದುಕೊಂಡ!

ಶಿರಸಿ: ಅಡಿಕೆ ಕದ್ದು ಪರಾರಿಯಾಗಿದ್ದ ಪ್ರಭಾಕರ ಭಂಡಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಸಂಗ್ರಹಿಸಿದ್ದ 30 ಸಾವಿರ ರೂ ಮೌಲ್ಯದ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಡಿಕೆ ಕಳ್ಳತನ ನಡೆದ ಬಗ್ಗೆ ಸೋಮವಾರ ಪ್ರಕರಣವೊಂದು ದಾಖಲಾಗಿದ್ದು, ಪೊಲಿಸರು ಅದರ ಬೆನ್ನು ಬಿದ್ದಿದ್ದರು. ಅನುಮಾನದ ಹಿನ್ನಲೆ ಬೊಮ್ಮನಳ್ಳಿಯ ಪ್ರಭಾಕರ ಗಣಪತಿ ಭಂಡಾರಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಪೊಲೀಸರನ್ನು ನೋಡಿ ಬೆವತ ಆತ ಅಡಿಕೆ ಕದ್ದಿರುವುದನ್ನು ಒಪ್ಪಿಕೊಂಡಿದ್ದ. ಎರಡು ಚೀಲದಲ್ಲಿ ತುಂಬಿದ್ದ ಅಡಿಕೆಯನ್ನು ಕಾಣಿಸಿದ್ದ.

75 ಕೆಜಿಯಷ್ಟು ಸುಲಿದ ಅಡಿಕೆಯನ್ನು ಜಪ್ತು ಮಾಡಿದ ಪೊಲೀಸರು ಪ್ರಭಾಕರ ಭಂಡಾರಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸಿಪಿಐ ಸೀತಾರಾಮ ಪಿಎಸ್‌ಐ ದಯಾನಂದ ಜೋಗಳೇಕರ್ ಹಾಗೂ ಪೊಲೀಸ್ ಸಿಬ್ಬಂದಿ ಮಹಾದೇವ ನಾಯಕ, ಗಣಪತಿ ನಾಯ್ಕ, ಯಲ್ಲಪ್ಪ ಪೂಜಾರಿ ಈ ಕಾರ್ಯಾಚರಣೆಯಲ್ಲಿದ್ದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page