6

ಪರಸ್ತ್ರೀ ಮೇಲೆ ಮೋಹ | ಪೊಲೀಸ್ ಠಾಣೆಯಲ್ಲಿ ರಾಜಿ: ರಾತ್ರಿ ನಡೆದದ್ದು ದೊಡ್ಡ ಕಾಳಗ!

ಹೊನ್ನಾವರ: ಚಂದಾವರದ ಜನತಾ ಪ್ಲಾಟ್ ಕೇರಿಯ ಫೈಸಲ್ ಅವರ ಮನೆಯ ಮೇಲೆ ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. 20ಕ್ಕೂ ಅಧಿಕ ಜನ ದಾಳಿಯಲ್ಲಿದ್ದು, ಆ ಪೈಕಿ ಸಿಕ್ಕಿಬಿದ್ದ ಒಬ್ಬನ್ನನ್ನು ಹಿಡಿದ ಸ್ಥಳೀಯರು ಆತನನ್ನು ಹಗ್ಗದಿಂದ ಕಟ್ಟಿ ಥಳಿಸಿದ್ದಾರೆ.

ಬೈಕಿನಲ್ಲಿ ಬಂದ ದುಷ್ಕಮಿಗಳು ಮೊದಲು ಕಲ್ಲು ತೂರಾಟ ಮಾಡಿದ್ದಾರೆ. ಶಬ್ದ ಆಗಿರುವುದನ್ನು ಕೇಳಿ ಫೈಸಲ್ ಮನೆಯಿಂದ ಹೊರ ಬಂದಾಗ ದಾಳಿ ಮಾಡಿದ್ದಾರೆ. 20 ಬೈಕುಗಳು ಮನೆ ಹೊರಭಾಗದಲ್ಲಿರುವುದನ್ನು ಫೈಸಲ್ ಗಮನಿಸಿದ್ದಾರೆ. ಬೈಕಿನಲ್ಲಿದ್ದವರ ಕೈಯಲ್ಲಿ ಲಾಂಗ್, ಮಚ್ಚು, ಚೂರಿ, ದೊಣ್ಣೆ ಕಂಡು ಮನೆ ಸದಸ್ಯರು ಆತಂಕಕ್ಕೆ ಒಳಗಾಗಿದ್ದರು.

ಮನೆಯಲ್ಲಿದ್ದವರು ಬಾಗಿಲು ಹಾಕಲು ಪ್ರಯತ್ನಿಸಿದಾಗ ದುಷ್ಕರ್ಮಿ ತಂಡದ ಸದಸ್ಯನೊಬ್ಬ ಫೈಸಲ್‌ನ್ನು ಹೊರಗೆಳೆದು ದೊಣ್ಣೆಯಿಂದ ಹೊಡೆದಿದ್ದಾರೆ. ಜೊತೆಗೆ ಚಾಕುವಿನಿಂದ ಬೆನ್ನಿನ ಎಡಭಾಗಕ್ಕೆ ಇರಿದಿದ್ದಾರೆ. ಆಗ ಮನೆಯವರು ಬೊಬ್ಬೆ ಹೊಡೆದ ಸದ್ದಿಗೆ ಅಕ್ಕಪಕ್ಕದ ಮನೆಯವರು ಆಗಮಿಸಿ ದುಷ್ಕರ್ಮಿಗಳ ಮೇಲೆ ಪ್ರತಿದಾಳಿ ನಡೆಸಿದರು. ಆಗ ಬೈಕಿನಲ್ಲಿ ಬಂದವರು ಅಲ್ಲಿಂದ ಪರಾರಿಯಾದರು. ಆ ಪೈಕಿ ಒಬ್ಬ ಮಾತ್ರ ಸಿಕ್ಕಿಬಿದ್ದಿದ್ದು, ಆತನಿಗೆ ಥಳಿಸಿದ ಅಲ್ಲಿನವರು ನಂತರ ಪೊಲೀಸರಿಗೆ ಒಪ್ಪಿಸಿದರು.

ಬೀಗರ ಊಟಕ್ಕೆ ಹೋದಾಗ ದ್ವೇಷ!
ನ 11ರಂದು ಮಧ್ಯಾಹ್ನ ಚಂದಾವರದ ಶೇಡಿಮನೆಯ ಬೀಗರ ಊಟಕ್ಕೆ ಫೈಸಲ್ ಪತ್ನಿ ಜೊತೆ ತೆರಳಿದ್ದರು. ಅಲ್ಲಿ ಬಂದಿದ್ದ ಹಳಕಾರದ ಸಜ್ಜಾದ್ ಬೇಗ್ ಫೈಸಲ್ ಪತ್ನಿಯ ಮೊಬೈಲ್ ನಂ ಕೊಡುವಂತೆ ಪೀಡಿಸಿದ್ದ. ಆಗ ವಾಗ್ವಾದ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವನ್ನು ಬಗೆಹರಿಸಿಕೊಂಡಿದ್ದರು. ಆದರೆ, ಅದೇ ದಿನ ರಾತ್ರಿ ಕೆರಳಿದ ಗುಂಪು ಹೊಡೆದಾಟ ನಡೆಸಿದ ಬಗ್ಗೆ ಮಾಹಿತಿಯಿದೆ.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page