6

ಟಯರ್ ತ್ಯಾಜ್ಯಕ್ಕೆ ಬೆಂಕಿಯಿಟ್ಟ ಕೆಎಸ್‌ಆರ್‌ಟಿಸಿ!

ಕುಮಟಾ: ಕೆಎಸ್‌ಆರ್‌ಟಿಸಿ ಘಟಕದಲ್ಲಿನ ರಬ್ಬರ್ ಟಯರ್, ಸುಟ್ಟ ಆಯ್ಲುಗಳ ಮಿಶ್ರಣಕ್ಕೆ ಅಲ್ಲಿನ ಅಧಿಕಾರಿಗಳು ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಘಟಕದ ಸುತ್ತಲು ದಡ್ಡ ಹೊಗೆ ತುಂಬಿಕೊoಡಿದ್ದು, ಜನ ಉಸಿರಾಟಕ್ಕೆ ಸಹ ಸಮಸ್ಯೆ ಅನುಭವಿಸಿದರು.

ಈ ಬಗೆಯ ತ್ಯಾಜ್ಯಗಳನ್ನು ವೈಜ್ಞಾನಿಕ ವಿಲೇವಾರಿ ನಡೆಸಬೇಕು. ವೈಜ್ಞಾನಿಕ ವಿಲೇವಾರಿಗಾಗಿಯೇ ಪುರಸಭೆ ಸಾಕಷ್ಟು ಶ್ರಮಿಸುತ್ತಿದೆ. ಪುರಸಭೆಯವರಿಗೆ ಮಾಹಿತಿ ನೀಡಿದರೂ ಯಾವುದೇ ಶುಲ್ಕ ಪಡೆಯದೇ ಇಂಥ ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಅದಾಗಿಯೂ ಕೆಎಸ್‌ಆರ್‌ಟಿಸಿ ಘಟಕದವರು ತ್ಯಾಜ್ಯವನ್ನು ಪುರಸಭೆಗೆ ನೀಡದೇ ಬೆಂಕಿ ಹಚ್ಚುವ ಮೂಲಕ ಜನರ ಆರೋಗ್ಯ ಹದಗೆಡಿಸಿದ್ದಾರೆ.

ಘಟಕದ ಸುತ್ತಲು ಅನೇಕ ವೃದ್ಧರು ವಾಸವಾಗಿದ್ದಾರೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವವರಿದ್ದಾರೆ. ಆದರೆ, ಅವರ ಬಗ್ಗೆ ಕಿಂಚಿತ್ತು ಕಾಳಜಿವಹಿಸದ ನಿಗಮ ನಿಯಮಬಾಹಿರವಾಗಿ ತ್ಯಾಜ್ಯಕ್ಕೆ ಬೆಂಕಿಯಿಡುವ ಕೆಲಸ ಮಾಡಿದೆ. ಈ ಬಗ್ಗೆ ಪ್ರಶ್ನಿಸಿದವರಿಗೂ ಅಲ್ಲಿನವರು ಹಾರಿಕೆ ಉತ್ತರ ನೀಡಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page