6

ರಸ್ತೆ ಮೇಲೆ ಹರಿದ ಮನೆ ತ್ಯಾಜ್ಯ: ಜಡೆ ಜಗಳದಲ್ಲಿ ಹೊಡೆತ ತಿಂದವ ಅಮಾಯಕ!

ಭಟ್ಕಳ: ಮನೆಯಲ್ಲಿ ಬಳಸಿದ ನೀರನ್ನು ರಸ್ತೆ ಬಿಡುತ್ತಿದ್ದ ಬಗ್ಗೆ ಪ್ರಶ್ನಿಸಿದ ಕಾರಣ ಎದುರು ಮನೆಯವರು ಹೊಡೆತ ತಿಂದಿದ್ದಾರೆ!

ಮುಟ್ಟಳ್ಳಿ ಬಳಿಯ ತೆಲಂದದಲ್ಲಿ ವಸಂತ ಮಾಸ್ತಪ್ಪ ನಾಯ್ಕ ಅವರ ಮನೆಯಲ್ಲಿ ಬಳಸಿದ ನೀರನ್ನು ಜನ ಓಡಾಡುವ ರಸ್ತೆ ಮೇಲೆ ಬಿಡುತ್ತಾರೆ. ಈ ಬಗ್ಗೆ ಆ ಭಾಗದವರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಅದನ್ನು ಸಹಿಸದ ವಸಂತ ನಾಯ್ಕ ಅವರ ಪತ್ನಿ ರತ್ನಾ ನಾಯ್ಕ ಎದುರು ಮನೆಯ ನಟರಾಜ ನಾಯ್ಕ ಅವರ ತಲೆಯ ಮೇಲೆ ಕಲ್ಲಿನಿಂದ ಕುಟ್ಟಿದ್ದಾರೆ!

`ನಟರಾಜ ನಾಯ್ಕ ಅವರು ಅವರಿವರಲ್ಲಿ ಹೇಳಿದ ಕಾರಣದಿಂದಲೇ ಊರಿನ ಜನ ಈ ಬಗ್ಗೆ ತಮ್ಮನ್ನು ಪ್ರಶ್ನಿಸಿದ್ದಾರೆ’ ಎಂಬುದು ರತ್ನಾ ನಾಯ್ಕ ಅವರ ಸಿಟ್ಟಿಗೆ ಕಾರಣ. `ರಸ್ತೆ ಮೇಲೆ ನೀರು ಹೋಗುತ್ತಿದೆ. ಯಾರ ತಲೆ ಹೋಗುವ ವಿಷಯ ಅದಾಗಿರಲಿಲ್ಲ’ ಎಂಬುದು ಅವರ ಸಮರ್ಥನೆ.

ರತ್ನ ನಾಯ್ಕ ಅವರು ನಟರಾಜ ನಾಯ್ಕರ ಕುತ್ತಿಗೆ ಹಿಡಿದು ಕಲ್ಲಿನಿಂದ ಜಪ್ಪಿದ ಕಾರಣ ನಟರಾಜರ ತಲೆಭಾಗದಿಂದ ರಕ್ತ ಬಂದಿದೆ. ಕೈ ಬುಜಕ್ಕೆ ಸಹ ಪೆಟ್ಟಾಗಿದೆ. ಈ ಬಗ್ಗೆ ನಟರಾಜ ನಾಯ್ಕ ಅವರ ಪತ್ನಿ ಸಂಗೀತ ಪೊಲೀಸ್ ದೂರು ನೀಡಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page