6

ಹೊಲಿಗೆ ಶಿಬಿರಕ್ಕೆ ಚಾಲನೆ: ಮಹಿಳಾ ಸ್ವಾವಲಂಬನೆಗೆ ರೋಟರಿ ಗವರ್ನರ್ ಕರೆ

ಕಾರವಾರ: ರೋಟರಿ ಪ್ರಾಂತಪಾಲ ರೊಟೇರಿಯನ್ ಶರದ್ ಪೈ ಸೋಮವಾರ ಕಾರವಾರಕ್ಕೆ ಆಗಮಿಸಿದ್ದು, ಈ ವೇಳೆ ರೋಟರಿ ಕ್ಲಬ್ ಮಹಿಳೆಯರಿಗಾಗಿ ಆಯೋಜಿಸಿದ ಹೊಲಿಗೆ ಹಾಗೂ ಕಸೂತಿ ಶಿಬಿರಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು `ಶಾಂತಿ ನಿರ್ಮಾಣ, ಸಂಘರ್ಷ ತಡೆಗಟ್ಟುವಿಕೆ, ರೋಗ ತಡೆಗಟ್ಟುವಿಕೆ, ಚಿಕಿತ್ಸೆ, ನೀರು ಹಾಗೂ ನೈರ್ಮಲ್ಯ, ತಾಯಿ ಮತ್ತು ಮಗುವಿನ ಆರೋಗ್ಯ, ಮೂಲ ಶಿಕ್ಷಣ ಹಾಗೂ ಸಾಕ್ಷರತೆ, ಸಮುದಾಯ ಆರ್ಥಿಕ ಅಭೀವೃದ್ಧಿ ಜೊತೆ ಪರಿಸರ ಈ ಚಟುವಟಿಗಳಿಗೆ ರೋಟರಿ ಸಂಸ್ಥೆ ಶ್ರಮಿಸುತ್ತಿದೆ. ಅದರ ಅಂಗವಾಗಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದೇವೆ’ ಎಂದರು. ಈ ವೇಳೆ ಕಾರವಾರ ರೋಟರಿ ಕ್ಲಬ್ ಸದಸ್ಯರ ಸೇವೆಯನ್ನು ಶ್ಲಾಘಿಸಿದರು.

ಪ್ರಾಂತ ಕಾರ್ಯದರ್ಶಿ ಅಜಯ್ ಮೆನನ್ ಹಾಗೂ ಸಹಾಯಕ ಪ್ರಾಂತಪಾಲ ಸ್ಟಿಫನ್ ರೊಡ್ರಗೀಸ್ ಈ ಸಭೆಯಲ್ಲಿ ಮಾತನಾಡಿದರು. ಪ್ರಮುಖರಾದ ರಾಘವೇಂದ್ರ ಪ್ರಭು, ಕೆ ಡಿ ಪೆಡ್ನೇಕರ, ಪ್ರಸನ್ನ ತೆಂಡೂಲಕರ, ಎಂ ಎ ಕಿತ್ತೂರ, ಸೂರಜ ಗಾಂವಕರ, ಡಾ ಸಮೀರಕುಮಾರ ನಾಯಕ, ಡಾ ಅರ್ಜುನ ಉಪಾಧ್ಯಾಯ, ಅನಮೋಲ ರೇವಣಕರ, ಪಿ ಎಸ್ ನಾಯ್ಕ, ಕೃಷ್ಣಾ ಕೇಳಸ್ಕರ್, ಗುರುದತ್ತಾ ಬಂಟ್, ಸುರೇಶ ನಾಯ್ಕ, ಸಾತಪ್ಪಾ ತಾಂಡೇಲ, ಮುರಲಿ ಗೋವೆಕರ, ಪ್ರದೀಪ ನಾಯ್ಕ, ಸೀಮಾ ಗೋವೆಕರ, ಸೋನಾ ಫರ್ನಾಂಡಿಸ್ ಹಾಗೂ ಹೊಲಿಗೆ ತರಬೇತಿ ಶಿಕ್ಷಕಿ ಶುಭಾಂಗಿ ಶಿರೋಡಕರ್ ಇದ್ದರು.

ಕಾರವಾರ ರೋಟರಿ ಕ್ಲಬ್ ಅಧ್ಯಕ್ಷ ಮಾರುತಿ ಕಾಮತ ಅತಿಥಿಗಳನ್ನು ಬರಮಾಡಿಕೊಂಡರು. ಶೈಲೇಶ ಹಳ್ದಿಪೂರ್ ನಿರೂಪಿಸಿದರು. ಕಾರ್ಯದರ್ಶಿ ಆನಂದ ನಾಯ್ಕ ವಂದಿಸಿದರು. .

 

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page