6

ಪಾನ್ ಗುಟಕಾದಿಂದ ತಂದ ಕಾನ್ಸರ್: ಮೈಸೂರಿಗೆ ಹೊರಟ ಅಡುಗೆ ಭಟ್ಟರು ಹೋಗಿದ್ದೆಲ್ಲಿ?

ಶಿರಸಿ: ಅಡುಗೆ ಕೆಲಸ ಮಾಡುವ ಗಣೇಶ ಭಟ್ಟರು ಕಾಣೆಯಾಗಿದ್ದಾರೆ.

ಶಿರಸಿ ಕಳವೆ ಗ್ರಾಮದ ಗಣೇಶ ಬೈರವೇಶ್ವರ ಭಟ್ಟ (63) ಸದಾ ಗುಟಕಾ-ಪಾನ್ ಮಸಾಲ ತಿನ್ನುತ್ತಿದ್ದರು. ಇದರಿಂದ ಅವರಿಗೆ ಬಾಯಿ ಕಾನ್ಸರ್ ಆಗಿತ್ತು. ಈಚೆಗೆ ಹೃದಯ ರೋಗ ಸಹ ಪತ್ತೆಯಾಗಿತ್ತು.

ನ 11ರ ಬೆಳಗ್ಗೆ ಶಿರಸಿ ರಾಘವೇಂದ್ರ ಮಠಕ್ಕೆ ಅವರು ಕೆಲಸಕ್ಕೆ ಬಂದಿದ್ದರು. ಕೆಲಸ ಮಾಡುವಾಗ ಸಹದ್ಯೋಗಿ ಬಳಿ ಮೈಸೂರಿಗೆ ಹೋಗಿ ಬರುವ ವಿಚಾರದ ಬಗ್ಗೆ ಮಾತನಾಡಿದ್ದರು. ಮೈಸೂರಿಗೆ ಹೊರಟ ಅವರು ಈವರೆಗೂ ಮನೆಗೆ ಬಂದಿಲ್ಲ.

ಎರಡು ದಿನದ ನಂತರ ಗಣೇಶ ಭಟ್ಟರು ತಮ್ಮ ಅಕ್ಕನ ಮೊಬೈಲಿಗೆ ವಾಟ್ಸಪ್ ಮೂಲಕ ವೈಸ್ ಮೆಸೆಜ್ ಕಳುಹಿಸಿದ್ದಾರೆ. `ಯಾರಿಗೂ ತೊಂದರೆ ಕೊಡಬಾರದು ಎಂದು ನಾನು ಹೊರಗೆ ಬಂದಿದ್ದೇನೆ’ ಎಂದವರು ಹೇಳಿದ್ದಾರೆ. `ನಾನು ಜೀವನವನ್ನು ಅಂತ್ಯ ಮಾಡಿಕೊಳ್ಳುವೆ’ ಎಂದು ಸಹ ಹೇಳಿಕೊಂಡಿದ್ದಾರೆ.

`ಗೋದಿ ಬಣ್ಣ – ಸದೃಢ ಮೈಕಟ್ಟು ಹೊಂದಿ ಕೊರಳಲ್ಲಿ ರುದ್ರಾಕ್ಷಿ ಸರ, ಕೈಯಲ್ಲಿ ಕಡಗ ಹೊಂದಿರುವ ಗುಂಡು ಮುಖದ ಪಾನ್ ಗುಟಕಾ ಜಗಿಯುವ ಗಣೇಶ ಭಟ್ಟರನ್ನು ಹುಡುಕಿಕೊಡಿ’ ಎಂದು ಲಯನ್ಸ ನಗರದಲ್ಲಿ ವಾಸವಾಗಿರುವ ರಮೇಶ ಭಟ್ಟರು ಪೊಲೀಸ್ ದೂರು ನೀಡಿದ್ದಾರೆ.

ತಂಬಾಕು ಕಾನ್ಸರ್’ಗೆ ಕಾರಣ: ಇಂದೇ ಬಿಟ್ಟುಬಿಡಿ!

 

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page