6

ಗುಜುರಿ ವ್ಯಾಪಾರಿ ಬಾಯ್ಬಿಟ್ಟ ಸತ್ಯ: ಸಿಕ್ಕಿಬಿದ್ದ ಸರ್ಕಾರಿ ಕಬ್ಬಿಣ ಕಳ್ಳ!

ದಾಂಡೇಲಿ: ವಿದ್ಯುತ್ ಕಂಬಕ್ಕೆ ಅಳವಡಿಸುವ ಕಬ್ಬಿಣದ ಸಲಕರಣೆಗಳನ್ನು ಅಪಹರಿಸುತ್ತಿದ್ದ ಕಳ್ಳನನ್ನು ಹೆಸ್ಕಾಂ ಅಧಿಕಾರಿಗಳು ವಿಶೇಷ ತಂಡ ರಚಿಸಿ ಹಿಡಿದಿದ್ದಾರೆ.

ಹಳೆ ದಾಂಡೇಲಿ, ಕೊಗಿಲಬನ ಸೇರಿ ನಾನಾ ಪ್ರದೇಶದಲ್ಲಿ ವಿದ್ಯುತ್ ಕಂಬಕ್ಕೆ ಅಳವಡಿಸುವ ಜಿಓಎಸ್ ಹಾಗೂ ಇನ್ನಿತರ ಕಬ್ಬಿಣದ ಸಲಕರಣೆಗಳನ್ನು ಬೈಲಪಾರುವಿನ ವಿಲ್ಸನ್ ಎಂಬಾತ ಕದಿಯುತ್ತಿದ್ದ. ಆತನನ್ನು ಹುಡುಕುವುದೇ ಹೆಸ್ಕಾಂ’ಗೆ ಸಾಹಸವಾಗಿತ್ತು. ಹೆಸ್ಕಾಂ ಅಧಿಕಾರಿ ದೀಪಕ ನಾಯಕ ಶಾಖಾಧಿಕಾರಿ ಉದಯ ಸೇರಿಕೊಂಡು ಕಳ್ಳನ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.

ಪಟೇಲ್ ವೃತ್ತದ ಗುಜುರಿ ಅಂಗಡಿಗೆ ತೆರಳಿ ಪರಿಶೀಲನೆ ನಡೆಸಿದ ತಂಡಕ್ಕೆ ಅಲ್ಲಿ ಹೆಸ್ಕಾಂ’ಗೆ ಸಂಬoಧಿಸಿದ ಕೆಲ ವಸ್ತುಗಳು ಸಿಕ್ಕಿದ್ದವು. ಗುಜುರಿ ಅಂಗಡಿಯವನನ್ನು ವಿಚಾರಿಸಿದಾಗ ಆತ ವಿಲ್ಸನ್ ಮನೆಯನ್ನು ತೋರಿಸಿದ್ದ. ಆ ಮನೆಯಲ್ಲಿ ಶೋಧ ನಡೆಸಿದಾಗ ಇನ್ನೂ ಅನೇಕ ಕದ್ದ ಸಾಮಗ್ರಿಗಳು ಸಿಕ್ಕಿದವು. ಅಲ್ಲಿಯೇ ವಿಲ್ಸನನನ್ನು ಪೊಲೀಸ್  ಅಧಿಕಾರಿಗಳು ವಶಕ್ಕೆ ಪಡೆದು ಜೀಪಿಗೆ ತುಂಬಿಕೊoಡರು. ಗುಜುರಿ ವ್ಯಾಪಾರಿಯ ವಿಚಾರಣೆ ಸಹ ಮುಂದುವರೆದಿದೆ.

 

 

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page