6

ಕದಿಯೋದೇ ಇವರ ಬಿಸಿನೆಸ್ಸು.. ಕುಡಿಯೋದು ಅವರ ವೀಕನೆಸ್ಸು!

ದಾಂಡೇಲಿ: ಕಳೆದ ವಾರ ದಾಂಡೇಲಿಯಲ್ಲಿ ಸಿಕ್ಕಿಬಿದ್ದ ಮೂವರು ಕಳ್ಳರಿಗೆ ಕದಿಯೋದೇ ಮುಖ್ಯ ವೃತ್ತಿಯಾಗಿತ್ತು. ಇದನ್ನು ಹೊರತುಪಡಿಸಿ ಹಗಲಿನಲ್ಲಿ ಅಲ್ಲಿ-ಇಲ್ಲಿ ಕೂಲಿ ಕೆಲಸ, ಹಮಾಲಿ ಮಾಡಿ ವೇಷ ಮರೆಸಿಕೊಳ್ಳುತ್ತಿದ್ದರು. ಸಾಕಷ್ಟು ಬಾರಿ ಪೊಲೀಸರನ್ನೇ ಯಾಮಾರಿಸಿದ್ದ ಈ ಮೂವರು ಈ ಬಾರಿಯೂ ಮದ್ಯದ ಅಮಲಿನಲ್ಲಿರದಿದ್ದರೆ ಸಿಕ್ಕಿ ಬೀಳುತ್ತಿರಲಿಲ್ಲ.
ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ನಿಯನ್ ಧರ್ಮಕ್ಕೆ ಸೇರಿದ ಈ ಮೂವರನ್ನು ಒಂದಾಗಿಸಿದ್ದು ಅದೇ ಹಳೇ ದಾಂಡೇಲಿಯ ಮೂಲೆಯಲ್ಲಿರುವ ಕಾರು`ಬಾರು’. ಮಾರುತಿನಗರದ ಅಶೋಕ ಗುರವ್, ಫೈರೋಜ್ ಸತ್ತಾರ್ ಹಾಗೂ ಗಾಂಧೀನಗರದ ಮೈಕಲ್ ಬನ್ನಿ ಅಂದು ಸ್ನೇಹಿತರಾದವರು ಪ್ರತಿ ದಿನ ರಾತ್ರಿ ಒಂದೇ ಕಡೆ ಸೇರುತ್ತಿದ್ದರು. ಮುಂದಿನ ಕಳ್ಳತನದ ಬಗ್ಗೆ ಅವರು ಚರ್ಚಿಸಿ, ಅದಕ್ಕಾಗಿ ತಯಾರಿ ನಡೆಸುತ್ತಿದ್ದರು. ಯಾರೂ ಇಲ್ಲದ ಒಂಟಿಮನೆ, ದೇವಾಲಯಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿದ್ದರು.
ಅವರವರ ನಡುವೆ ಸಣ್ಣಪುಟ್ಟ ಕಚ್ಚಾಟ ನಡೆದಾಗ ಮುನಿಸಿಕೊಂಡು ಬೇರೆಯಾಗುತ್ತಿದ್ದರು. ಆಗ ಪ್ರತಿಯೊಬ್ಬರು ಬೇರೆ ಬೇರೆಯಾಗಿ ಕಳ್ಳತನ ನಡೆಸಿ, ದಿನ ದೂಡುತ್ತಿದ್ದರು. ಮುನಿಸು ಮುಗಿದ ನಂತರ ಮತ್ತೆ ಬಾರಿನ ಮೂಲೆಯಲ್ಲಿ ಒಟ್ಟಿಗೆ ಕುಳಿತು ತಮ್ಮ ಕಳ್ಳತನದ ಸಾಧನೆಗಳ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದರು. ಹೀಗೆ ತಾವು ಮಾಡಿದ ಕಳ್ಳ ಸಾಧನೆಯ ಬಗ್ಗೆ ಹೇಳಿಕೊಳ್ಳುತ್ತಿರುವಾಗ ಅದನ್ನು ಆಲಿಸಿದ ವ್ಯಕ್ತಿಯೊಬ್ಬ ಆ ಬಗ್ಗೆ ಪೊಲೀಸರಿಗೆ ಹೇಳಿದ್ದು, ಅದೇ ನಶೆಯಲ್ಲಿದ್ದಾಗ ಪೊಲೀಸರು ಅವರ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರ ಮುಂದೆಯೂ ತಾವು ದೊಡ್ಡ ಸಾಧನೆ ಮಾಡಿದವರಂತೆ ಬಡಾಯಿ ಕೊಚ್ಚಿಕೊಂಡಿದ್ದಾರೆ. ನಶೆ ಇಳಿದ ಮೇಲೆ ಪೊಲೀಸರು ಲಾಟಿ ಋಚಿ ತೋರಿಸಿ, ಇನ್ನಷ್ಟು ಸತ್ಯ ಹೊರಹಾಕಿಸಿದ್ದಾರೆ.
ಪ್ರಸ್ತುತ ಪೊಲೀಸ್ ವಿಚಾರಣೆ ವೇಳೆ ಈ ಕಳ್ಳಸಂತೆ ತಂಡದಿoದ ಸ್ಪೋಟಕ ವಿಷಯಗಳ ಮಾಹಿತಿ ಹೊರಬಿದ್ದಿದ್ದು, ಅವರ ವಿರುದ್ಧ ದೋಷಾರೋಪಣ ಪಟ್ಟಿ ಸಿದ್ಧವಾಗುತ್ತಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    Leave a Reply

    Your email address will not be published. Required fields are marked *

    You cannot copy content of this page