6

ಅಪ್ರಾಪ್ತೆ ಮೇಲೆ ಅತ್ಯಾಚಾರ: ಸಾಂತ್ವಾನ ಹೇಳಿ ಸಹಾಯ ಮಾಡಿದ ಮಹಿಳಾ ಪೊಲೀಸ್

ಯಲ್ಲಾಪುರ: ಹೈಸ್ಕೂಲ್ ಹುಡುಗಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿದವರ ವಿರುದ್ಧ ದೂರು ದಾಖಲಾಗಿದ್ದು, ಸಂತ್ರಸ್ತೆಗೆ ಪೊಲೀಸರು ಧೈರ್ಯ ತುಂಬಿ ಸಾಂತ್ವಾನ ಹೇಳಿದ್ದಾರೆ.

ಮಂಚಿಕೇರಿ ಭಾಗದಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕಿಗೆ ನಂದನ್ ಎಂಬಾತ ಪರಿಚಯವಾಗಿದ್ದು, ಆಕೆಯನ್ನು ಆತ ಕಾಡಿಸುತ್ತಿದ್ದ. ಎರಡು ವಾರದ ಹಿಂದೆ ಬಾಲಕಿಯನ್ನು ನಂದನ್ ಜೊತೆ ಮತ್ತೆ ಇಬ್ಬರು ಸೇರಿ ಪುಸಲಾಯಿಸಿದ್ದರು. ಆಕೆಯ ಮೇಲೆ ಅತ್ಯಾಚಾರ ನಡೆದಿದ್ದು, ಸಂತ್ರಸ್ತ ಬಾಲಕಿ ಮಂಕಾಗಿದ್ದಳು.

ಈ ಬಗ್ಗೆ ಮನೆಯವರು ಪ್ರಶ್ನಿಸಿದಾಗ ಕ್ರೂರಕೃತ್ಯ ಬೆಳಕಿಗೆ ಬಂದಿದೆ. ಪೊಲೀಸ್ ದೂರು ನೀಡಲು ಸಹ ಬಾಲಕಿ ಭಯಗೊಂಡಿದ್ದು, ಮಹಿಳಾ ಪೊಲೀಸರು ಆಕೆಗೆ ಧೈರ್ಯ ತುಂಬಿದರು. ಆಪ್ತ ಸಮಾಲೋಚನೆ ಮೂಲಕ ನಡೆದ ಘಟನಾವಳಿಗಳ ಮಾಹಿತಿ ಪಡೆದರು.

ಕೊನೆಗೆ ಪಾಲಕರ ಸಮ್ಮುಖದಲ್ಲಿ ಬಾಲಕಿ ದೂರು ನೀಡಿದ್ದು, ಆರೋಪಿ ನಂದನ್ ಸಹಚರರ ಹೆಸರು, ವಿಳಾಸ ಗೊತ್ತಾಗಿಲ್ಲ. ಆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page