6

ಬಾಲಕಿ ಮೇಲೆ ಅತ್ಯಾಚಾರ: ಕ್ರೂರಿಗೆ 20 ವರ್ಷ ಜೈಲು!

ಶಿರಸಿ: ಬಾಲಕಿ ಅತ್ಯಾಚಾರ ಆರೋಪ ಸಾಭೀತಾದ ಹಿನ್ನಲೆ ಸುನೀಲ ಬೋವಿವಡ್ಡರ್ ಎಂಬಾತನಿಗೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 1 ಲಕ್ಷ ರೂ ದಂಡ ಪಾವತಿಸಲು ಸೂಚಿಸಿದೆ.

ಶಿರಸಿ ತಾಲೂಕಿನ ಕುಪಗಡ್ಡೆಯ ಸುನೀಲ್ ಸುರೇಶ ಬೋವಿವಡ್ಡರ್ 2021ರ ನವೆಂಬರ್ 11ರಂದು ಬನವಾಸಿ ಬಳಿ ಬಾಲಕಿ ಮೇಲೆ ಕೈ ಹಾಕಿದ್ದ. ಆಕೆ ಪ್ರತಿಭಟಿಸಿದರೂ ಮನ್ನಿಸದೇ ಅತ್ಯಾಚಾರವೆಸಗಿದ್ದ. ಈ ಬಗ್ಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗ ಸಿಪಿಐ ಆಗಿದ್ದ ರಾಮಚಂದ್ರ ನಾಯಕ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಜೊತೆಗೆ ಅತ್ಯಾಚಾರ ನಡೆದ ಕುರಿತು ಪೂರಕ ಸಾಕ್ಷಿಗಳನ್ನು ಒದಗಿಸಿದ್ದರು.

ಸಂತ್ರಸ್ತ ಬಾಲಕಿ ಪರವಾಗಿ ಸರಕಾರಿ ಅಭಿಯೋಜಕರಾದ ಶುಭಾ ಗಾಂವಕರ್ ಹಾಗು ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು. ಅತ್ಯಾಚಾರ ಆರೋಪಿಯ ಕ್ರೂರತೆಯ ಬಗ್ಗೆ ಅವರು ಸಮರ್ಥವಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶೆ ಪ್ರತಿಭಾ ಕುಲಕರ್ಣಿ ಅವರು ಶಿಕ್ಷೆ ಪ್ರಕಟಿಸಿದರು. 20 ವರ್ಷ ಶಿಕ್ಷೆ ಹಾಗೂ 1ಲಕ್ಷ ರೂ ದಂಡ ದಂಡ ಪಾವತಿಸುವಂತೆ ಅವರು ಆದೇಶ ಹೊರಡಿಸಿದರು.

 

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page