6

ಕುಟುಂಬ ಕಲಹ: ರಾತ್ರಿ ಹೊರಟ ಹೆಣ್ಮಗಳು ಹೋಗಿದ್ದಾದರೂ ಎಲ್ಲಿ?

ಸಿದ್ದಾಪುರ: ತಂದೆ ಬೈಗುಳಕ್ಕೆ ಬೆದರಿದ ಗೌರಿ ಬೇಸ್ತ (25) ರಾತ್ರಿ ವೇಳೆ ಮನೆ ಬಿಟ್ಟು ಹೋಗಿದ್ದು, ಇಡೀ ಕುಟುಂಬದವರು ಆಕೆಯ ಹುಡುಕಾಟದಲ್ಲಿ ತೊಡಗಿದ್ದಾರೆ.

ಸಿದ್ದಾಪುರ ಹೊಸೂರು ಜನತಾ ಕಾಲೋನಿಯ ಜ್ಞಾನದೇವ ಬೇಸ್ತಾ ಅವರ ಮನೆಯಲ್ಲಿ ನ 21ರ ಸಂಜೆ 7 ಗಂಟೆಗೆ ಜಗಳವಾಗಿತ್ತು. ಜ್ಞಾನದೇವ ಬೇಸ್ತಾ ಅವರು ತಮ್ಮ ಪತ್ನಿ ಹಾಗೂ ಮಗನಿಗೆ ಬೈದಿದ್ದರು. ಈ ವೇಳೆ ಮಗಳು ಗೌರಿ ಬೇಸ್ತಾ ಅವರಿಗೂ ಬುದ್ದಿಮಾತು ಹೇಳಿದ್ದರು. `ಹೆಣ್ಣು ಮಕ್ಕಳು ಹಾಗೆಲ್ಲ ಸಿಟ್ಟು ಮಾಡಿಕೊಳ್ಳಬಾರದು. ಕುಟುಂಬದವರೊoದಿಗೆ ಚನ್ನಾಗಿರಬೇಕು’ ಎಂದಿದ್ದರು.

ತoದೆ ಮಾತಿಗೆ ಗೌರಿ ಬೇಸ್ತಾ ಎದುರುತ್ತರ ನೀಡಿದಾಗ ಜ್ಞಾನದೇವ ಬೇಸ್ತಾ ಅವರು ಗದರಿಸಿದ್ದರು. ಆಗ ಏಕಾಏಕಿ ಏರುಧ್ವನಿಯಲ್ಲಿ ಕೂಗಾಡಿದ ಗೌರಿ 8 ಗಂಟೆ ವೇಳೆಗೆ ಬ್ಯಾಗಿನಲ್ಲಿ ಬಟ್ಟೆ ತುಂಬಿಕೊoಡು ಮನೆ ಬಿಟ್ಟು ಹೋದರು. ಈ ರಾತ್ರಿ ಒಂಟಿ ಹೆಣ್ಣು ಮಗಳು ಎಲ್ಲಿ ಹೋದಳು? ಈಗ ಎಲ್ಲಿದ್ದಾಳೆ? ಹೇಗಿದ್ದಾಳೆ? ಎಂದು ಪಾಲಕರಿಗೆ ಗೊತ್ತಿಲ್ಲ. ಗೌರಿ ಬೇಸ್ತಾರ ಮೊಬೈಲ್’ಗೆ ಫೋನ್ ಮಾಡಿದರೂ ಸಂಪರ್ಕ ಸಾಧ್ಯವಾಗುತ್ತಿಲ್ಲ.

ಸಂಬoಧಿಕರ ಮನೆಯಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಈ ಹಿನ್ನಲೆ ಜ್ಞಾನೇಶ್ವರ ಬೇಸ್ತಾ ಅವರು ಪೊಲೀಸ್ ದೂರು ನೀಡಿದ್ದು, `ಮಗಳನ್ನು ಹುಡುಕಿಕೊಡಿ’ ಎಂದು ಮನವಿ ಮಾಡಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page