6

ದೇವರಿಗೆ ಹಚ್ಚಿದ ದೀಪ ಮನೆ ಸುಟ್ಟಿತು!

ಭಟ್ಕಳ: ದೇವರ ಮುಂದೆ ಹಚ್ಚಿದ ದೀಪ ಇಡೀ ಮನೆ ಸುಟ್ಟಿದೆ. ಜ್ವಾಲೆ ಉರಿದ ತಾಪಕ್ಕೆ ಮನೆಯಲ್ಲಿದ್ದ ಶಾಲಾ ಮಕ್ಕಳ ಪಠ್ಯ, ಬಟ್ಟೆ-ಬ್ಯಾಗುಗಳ ಜೊತೆ ಆಹಾರ ಸಾಮಗ್ರಿಗಳೆಲ್ಲವೂ ಸುಟ್ಟು ಕರಕಲಾಗಿದೆ.

ಬೆಳ್ನಿ ಗ್ರಾಮದ ಜ್ಯೋತಿ ಮೋಹನ ನಾಯ್ಕ ಅವರು ದೇವರಿಗೆ ದೀಪ ಹಚ್ಚಿ ಶನಿವಾರ ಸಂಜೆ ಮಾರುಕಟ್ಟೆಗೆ ಹೋಗಿದ್ದರು. ಅವರು ಮಾರುಕಟ್ಟೆಯಿಂದ ಮರಳಿದಾಗ ಅವರಿಗೆ ಮನೆಯೇ ಇರಲಿಲ್ಲ. ಬೆಂಕಿ ಜ್ವಾಲೆಯಲ್ಲಿ ಮನೆ ಉರಿಯುತ್ತಿರುವುದನ್ನು ನೋಡಿ ಆ ಕುಟುಂಬದವರು ಕಣ್ಣೀರಾದರು.

ಬೆಂಕಿ ಹೊತ್ತಿ ಉರಿಯುವುದನ್ನು ನೋಡಿದ ಅಕ್ಕ-ಪಕ್ಕದವರು ಅದನ್ನು ನಂದಿಸುವ ಪ್ರಯತ್ನ ಮಾಡಿದರು. ಅಲ್ಲಿದ್ದ ಬಾವಿಯಿಂದ ನೀರು ತಂದು ಚೆಲ್ಲಿದರು. ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು. ಮನೆ ಮಾಲಕ ಮೋಹನ್ ನಾಯ್ಕ ಅವರಿಗೂ ಕೆಲವರು ಫೋನ್ ಮಾಡಿದರು. ಆದರೆ, ಅದ್ಯಾವುದು ಪ್ರಯೋಜನಕ್ಕೆ ಬರಲಿಲ್ಲ.

ಮಾರುಕಟ್ಟೆಗೆ ಹೋಗಿದ್ದ ಮೋಹನ ನಾಯ್ಕ ಅವರ ಕುಟುಂಬ ಮರಳಿ ಬರುವುದರೊಳಗೆ ಇಡೀ ಮನೆ ಕರಕಲಾಗಿತ್ತು.

 

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page